ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವು ಪ್ರತ್ಯಕ್ಷ

ಹೊಸದಿಗಂತ ವರದಿ,ಚಿಕ್ಕಮಗಳೂರು:

ಕಳಸ ಪಟ್ಟಣದ ಕಳಸೇಶ್ವರ ದೇವಸ್ಥಾನದ ಬಳಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಎಂಬ ಹಾವು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಈ ಹಾವು ಅಳಿವಿನಂಚಿನಲ್ಲಿದೆ.
ದೇವಸ್ಥಾನದ ಪಕ್ಕದ ಚಂದ್ರು ಭಟ್ ಅವರ ಮನೆಯ ಅಂಗಳದ ಗಿಡದಲ್ಲಿ ಬ್ಯಾಂಬೋ ಪಿಟ್ ವೈಫರ್ ಹಾವು ಕಂಡುಬಂದಿದೆ. ಹೆಚ್ಚಾಗಿ ಬಿದಿರಿನ ಮೆಳೆಗಳಲ್ಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ಈ ಹಾವು ಕಡಿದರೆ ಸಾಯುವುದಿಲ್ಲ. ಆದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ತಜ್ಞರು.
ಅಪರೂಪದ ಹಾವನ್ನು ಕಂಡ ಸ್ಥಳೀಯರು ಖುಷಿ ಪಟ್ಟಿದ್ದಾರೆ. ಉರಗ ಪ್ರೇಮಿ ರಿಜ್ವಾನ್ ಅವರು ಹಾವನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!