ಉಕ್ರೇನ್ ನಲ್ಲಿ ಸಿಲುಕಿರುವ ಮೈಸೂರಿನ 27ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ಹೊಸದಿಗಂತ ವರದಿ, ಮೈಸೂರು:

ರಷ್ಯಾದ ದಾಳಿಯಲ್ಲಿ ನಲುಗಿರುವ ಉಕ್ರೇನ್ ನಲ್ಲಿ ಮೈಸೂರಿನ 28 ವಿದ್ಯಾರ್ಥಿಗಳ ಪೈಕಿ ಒಬ್ಬರು ಮಾತ್ರ ನಮ್ಮ ದೇಶಕ್ಕೆ ವಾಪಸ್ ಆಗಿದ್ದು, ಉಳಿದವರನ್ನ ರಕ್ಷಿಸಬೇಕಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು.
ಬುಧವಾರ ಮೈಸೂರಿನ ಜಿ.ಪಂ ಸಭಾಂಗಣದ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 28 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಒಬ್ಬ ವಿದ್ಯಾರ್ಥಿ ವಾಪಸ್ ಬಂದಿದ್ದಾರೆ. 27 ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಆಗಬೇಕಿದೆ. ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಕೆಲವರಿಗೆ ಫೋನ್ ಸಂಪರ್ಕ ಇಲ್ಲ. ಒಬ್ಬರು ಸಿಕ್ಕರೆ ಅವರ ಸುತ್ತಲೂ ಇರುವ 7-8 ಜನರ ಮಾಹಿತಿ ಸಿಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಕೀವ್ ಮತ್ತು ಕಾರ್ಖಿವ್ ನಲ್ಲಿದ್ದಾರೆ. ಎಲ್ಲರ ಮೊಬೈಲ್‌ನಂಬರ್ ಹಾಗೂ ಅವರು ಇರುವ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೂಲಸೌಲಭ್ಯಗಳನ್ನು ಅವರಿಗೆ ಅಲ್ಲಿ ಮಾಡಲಾಗುತ್ತಿದೆ. ಇರುವ ಸ್ಥಳದಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ನಮಗೆ ಸಿಗುವ ಮಾಹಿತಿಯನ್ನು ರಿಯಲ್ ಟೈಮ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತೇವೆ. ಈ ಮಾಹಿತಿಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ತಲುಪಿಸಲಾಗುತ್ತಿದೆ. ಇಂದಿನಿAದ ವಿಮಾನಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಆದಷ್ಟು ಬೇಗ ಮೈಸೂರಿನ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಶ್ರಮಿಸುತ್ತಿದ್ದೇವೆ. ಪೋಷಕರಿಂದ ಮಾಹಿತಿ ಪಡೆದು ವರದಿ ನೀಡುವಂತೆ ಕೇಂದ್ರದಿAದ ಸೂಚನೆ ಬಂದಿದೆ ಎಂದರು.
ತಹಶೀಲ್ದಾರ್ ಗಳನ್ನ ವಿದ್ಯಾರ್ಥಿಗಳ ಮನೆಗೆ ಕಳಿಸಿದ್ದೇವೆ. ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಾಹಿತಿ ಸಂಗ್ರಹಿಸಿ ಧೈರ್ಯ ತುಂಬಲು ಹೇಳಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!