ದಿನಭವಿಷ್ಯ | ಮನೆ ಮತ್ತು ವೃತ್ತಿಕ್ಷೇತ್ರ ಎರಡರಲ್ಲೂ ನಿಮಗಿಂದು ಸಮಾಧಾನಕರ ಬೆಳವಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಆಪ್ತರೊಂದಿಗೆ ಭಿನ್ನ ಮತ ಉಂಟಾದೀತು. ಆದರೆ ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವೃತ್ತಿಯಲ್ಲಿ ಏರುಪೇರು ಅನುಭವಿಸುವಿರಿ.

ವೃಷಭ
ಹಣಕ್ಕೆ ಸಂಬಂಧಿಸಿ ಅತೀವ ನಿರ್ಲಕ್ಷ್ಯ ಪ್ರದರ್ಶಿಸುವ ಸಾಧ್ಯತೆ. ಹಾಗಾಗಿ ಖರ್ಚಿನ ಮೇಲೆ ಹಿಡಿತವಿಡಿ. ಸಾಲ ಕೊಡುವಾಗಲೂ ಎಚ್ಚರವಿರಲಿ.

ಮಿಥುನ
ಪ್ರತಿಯೊಂದು ವಿಷಯ ದಲ್ಲೂ ಸ್ಪರ್ಧಾತ್ಮಕ ಮನೋಭಾವ ಪ್ರದರ್ಶಿಸುವಿರಿ. ಸೋಲನ್ನು ಸುಲಭದಲ್ಲಿ ಒಪ್ಪಿಕೊಳ್ಳದ ಗುಣ ಮೆಚ್ಚುಗೆ ಗಳಿಸುವುದು.

ಕಟಕ
ಮನೆ ಮತ್ತು ವೃತ್ತಿಕ್ಷೇತ್ರ ಎರಡರಲ್ಲೂ ನಿಮಗಿಂದು ಸಮಾಧಾನಕರ ಬೆಳವಣಿಗೆ. ಚಿಂತೆಯ ಕಾರಣಗಳೇ ಇಲ್ಲ. ಆರ್ಥಿಕ ಲಾಭ.

ಸಿಂಹ
ನಿಮ್ಮ ಸುತ್ತ ಸಕಾರಾತ್ಮಕ ಬದಲಾವಣೆ ತರಬೇಕೆಂಬ ನಿಮ್ಮ ಉದ್ದೇಶವು ಸಾಧನೆಯಾಗುವುದು. ಕೆಲವರ ಸಹಕಾರವೂ ಲಭಿಸುವುದು.

ಕನ್ಯಾ
ಖಾಸಗಿ ಸಮಸ್ಯೆಯಲ್ಲಿ ಮುಳುಗುವಿರಿ. ವೃತ್ತಿ ಕಾರ್ಯ ಹಿನ್ನೆಡೆಗೆ ಸರಿಯುವುದು. ಭಾವನಾತ್ಮಕತೆಯು ನಿಮ್ಮ ವಿವೇಕವನ್ನು ಮರೆಮಾಡದಿರಲಿ.

ತುಲಾ
ಕೆಲವು ಕಷ್ಟಗಳು, ಅಡೆತಡೆಗಳು ಇಂದು ಬಾಧಿಸಬಹುದು. ಆದರಿಂದ ಧೃತಿಗೆಡಬೇಡಿ. ನಾಳೆ ಉತ್ತಮ ದಿನ ಬರುವುದು ಖಂಡಿತ.

ವೃಶ್ಚಿಕ
ಮಾತಿಗಿಂತ ಕೃತಿಗೆ ಆದ್ಯತೆ ನೀಡಿ. ನಿಮ್ಮನ್ನು ಅನುಮಾನಿಸುವವರಿಗೆ ಕಾರ್ಯದಿಂದಲೇ ಉತ್ತರ ಕೊಡಿ. ಹಣಕಾಸು ಸಮಸ್ಯೆ ಬೇಗ ಪರಿಹಾರ ಕಾಣುವುದು.

ಧನು
ಹೊಸ ಆತ್ಮೀಯ ಸಂಬಂಧ ಬೆಳೆದೀತು. ಆದರೆ ಅದರಿಂದ ನಿಮಗೆ ಹಾನಿಯೂ ಆದೀತು. ಎಚ್ಚರದಿಂದ ವ್ಯವಹರಿಸಿ. ಕಣ್ಣು ಮುಚ್ಚಿ ನಂಬಬೇಡಿ.

ಮಕರ
ಅತಿಯಾದ ಕಾರ್ಯ. ದಿನದಂತ್ಯಕ್ಕೆ ನಿಮ್ಮಲ್ಲಿ ಕಸುವೇ ಉಳಿದಿರಲಾರದು. ಕೌಟುಂಬಿಕ ಪರಿಸರದಲ್ಲಿ ಉಲ್ಲಾಸ ಕಾಣುವಿರಿ. ಬಂಧು ಭೇಟಿ.

ಕುಂಭ
ಯಶಸ್ಸು ಮತ್ತು ಬಂಧು ಪ್ರೇಮ ನಿಮ್ಮನ್ನು ಕುರುಡಾಗಿಸದಿರಲಿ. ಎಲ್ಲವನ್ನು ವಿವೇಚನೆಯಿಂದ ಪರಾಂಭರಿಸಿ. ಆರ್ಥಿಕ ಒತ್ತಡ ಸಂಭವ.

ಕುಂಭ
ಯಶಸ್ಸು , ಬಂಧು ಪ್ರೇಮ ನಿಮ್ಮನ್ನು ಕುರುಡಾಗಿಸದಿರಲಿ. ಎಲ್ಲವನ್ನು ವಿವೇಚನೆ ಯಿಂದ ಪರಾಂಭರಿಸಿ. ಆರ್ಥಿಕ ಒತ್ತಡ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!