ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಮಳೆಗೆ ಚೀನಾ ತತ್ತರಿಸಿದೆ. ಕಳೆದ ತಿಂಗಳಷ್ಟೇ ಧಾರಾಕಾರ ಮಳೆಯಿಂದಾಗಿ 33ಜನರು ಸಾವನ್ನಪ್ಪಿದ್ದರು. ಇದೀಗ ಹೊಸದಾಗಿ ಸುರಿದ ಮಳೆಯಿಂದಾಗಿ ಹೆಬೈ ಪ್ರದೇಶದಲ್ಲಿ ಪ್ರವಾಹ ಉಂಟಾಗಿ 29 ಜನರು ಸಾವನ್ನಪ್ಪಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ.
ಚೀನಾಗೆ ಮುಸಲಧಾರೆ ಬಿಟ್ಟೂ ಬಿಡದಂತೆ ಕಾಡುತ್ತಿದ್ದು, ರಾಜಧಾನಿಯ ಗಡಿಯಲ್ಲಿರುವ ಹೆಬೈ ಭಾಗಗಳಲ್ಲಿ, ಬೀದಿಗಳು ಪ್ರವಾಹದ ನೀರಿನಿಂದ ಕೆಸರುಮಯವಾಗಿವೆ. ಮುಳುಗಡೆಯಾದ ವಸ್ತುಗಳನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರು ತಮ್ಮ ಹಾನಿಗೊಳಗಾದ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಇನ್ನೂ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದು, ನಿರಾಶ್ರಿತರ ಶಿಬಿರಗಳತ್ತ ಕಳಿಸುತ್ತಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧಕಾರ್ಯವೂ ನಡೆಯುತ್ತಿದೆ. ಒಂದೊಡೆ ಕೊರೊನಾ, ಮತ್ತೊಂದೆಡೆ ಪ್ರವಾಹದಿಂದ ಚೀನಾ ಪರಿತಪಿಸುತ್ತಿದೆ.