SHOCKING NEWS | ಒಂದೇ ದಿನ 3.7 ಕೋಟಿ ಜನರಿಗೆ ಸೋಂಕು: ಕೋವಿಡ್ ತಾಂಡವಕ್ಕೆ ತತ್ತರಿಸಿದ ಡ್ರ್ಯಾಗನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೊರೋನಾ ತವರು ಚೀನಾದ ಅಕ್ಷರಶ ತತ್ತರಿಸಿದ್ದು, ಒಂದೇ ದಿನ 3.7 ಕೋಟಿ ಜನರಿಗೆ ಸೋಂಕು (ದೃಢಪಟ್ಟಿದೆ ಎಂದು ವರದಿಯೊಂದು ತಿಳಿಸಿದೆ.

ಇದು ಜಾಗತಿಕವಾಗಿ ಒಂದೇ ದಿನದಲ್ಲಿ ದಾಖಲಾದ ಸೋಂಕಿನ ಪ್ರಕರಣಗಳಲ್ಲಿ ದಾಖಲೆ ಬರೆದಿದೆ. ಇದುವರೆಗೆ ಒಂದೇ ದಿನ ದಾಖಲಾದ ಗರಿಷ್ಠ ಪ್ರಕರಣ 40 ಲಕ್ಷ ಇತ್ತು. ಆದರೆ, ಇದನ್ನೂ ಚೀನಾ ಮುರಿದಿದೆ.

ಸದಾ ಮೊದಲಿನಿಂದಲೂ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಕುರಿತು ಚೀನಾ ಸುಳ್ಳು ಲೆಕ್ಕಗಳನ್ನೇ ನೀಡುತ್ತಾ ಬಂದಿದ್ದು, ಇದೀಗ ವರದಿಗಳ ಪ್ರಕಾರ ಡಿಸೆಂಬರ್‌ 20ರಂದು ಚೀನಾದಲ್ಲಿ 3.7 ಕೋಟಿ ಜನಕ್ಕೆ ಸೋಂಕು ದೃಢಪಟ್ಟಿದೆ. ಆದರೆ, ಚೀನಾ ಮಾತ್ರ ಡಿಸೆಂಬರ್‌ 20ರಂದು ಕೇವಲ 3,049 ಪ್ರಕರಣ ದಾಖಲಾಗಿವೆ ಎಂಬುದಾಗಿ ಅಧಿಕೃತ ಮಾಹಿತಿ ನೀಡಿದೆ. ಹಾಗಾಗಿ, ಇನ್ನೂ ಯಾವ ಯಾವ ಮಾಹಿತಿಯನ್ನು ಚೀನಾ ಅಡಗಿಸಿದೆ ಎಂಬ ಪ್ರಶ್ನೆಗಳು ಮೂಡಿವೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಸಭೆಯಲ್ಲಿ ಡಿಸೆಂಬರ್‌ನಲ್ಲಿ ಮೊದಲ 20 ದಿನದಲ್ಲಿ 240 ಕೋಟಿ ಸೋಂಕಿನ ಪ್ರಕರಣ ದಾಖಲಾಗಿವೆ. ಇದು ಚೀನಾದ ಶೇ.18ರಷ್ಟು ಜನಸಂಖ್ಯೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!