ಹಳಿ ತಪ್ಪಿದ ಗೂಡ್ಸ್ ರೈಲಿನ 3 ಬೋಗಿಗಳು: ರೈಲು ಸಂಚಾರ ವ್ಯತ್ಯಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗೆ ಹೊರಟಿದ್ದ ಸರಕು ಸಾಗಣೆಯ 3 ಬೋಗಿಗಳು ಭೋಪಾಲ್ ಬಳಿಯ ಮಿಸ್ರೋಡ್ ಮತ್ತು ಮಂಡಿದೀಪ್ ನಿಲ್ದಾಣಗಳ ಮಧ್ಯದಲ್ಲಿ ಹಳಿತಪ್ಪಿದೆ.

ಮಧ್ಯಾಹ್ನ 12:45 ಕ್ಕೆ ಈ ಘಟನೆ ನಡೆದಿದ್ದು, ಪಶ್ಚಿಮ ಸೆಂಟ್ರಲ್ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಸಂಚಾರವನ್ನು ಯಥಾಸ್ಥಿತಿಗೆ ತರಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಬೋಗಿಗಳು ಹಳಿ ತಪ್ಪಿದ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿಯಿಂದ ಬೆಂಗಳೂರಿಗೆ ಆಟೋಮೊಬೈಲ್‌ಗಳನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲಿನ ಮೂರು ವ್ಯಾಗನ್‌ಗಳು ಮಧ್ಯಾಹ್ನ ಹಳಿತಪ್ಪಿವೆ. ರೈಲು ಸಂಚಾರವನ್ನು ಪುನಃಸ್ಥಾಪಿಸಲು ಹಿರಿಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!