ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕನನ್ನು ಚಾಕುವಿನಿಂದ ಇರಿದು ರೌಡಿಶೀಟರ್ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ಬನಶಂಕರಿ ಕಾವೇರಿ ನಗರದ 8ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.
21 ವರ್ಷದ ವಿಕ್ರಂ ಕೊಲೆಯಾದ ಯುವಕ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ವಸೀಂ(28) ಎಂಬಾತ ಕೃತ್ಯವೆಸಗಿದ್ದಾನೆ.
ಕೆಲ ವರ್ಷಗಳ ಹಿಂದೆ ಆರೋಪಿ ವಸೀಂ ಮೇಲೆ ವಿಕ್ರಂ ಹಲ್ಲೆ ಮಾಡಿದ್ದ. ಇದೇ ದ್ವೇಷದಿಂದ ಸ್ನೇಹಿತನ ಜೊತೆ ನಿಂತಿದ್ದಾಗ ಎದೆಗೆ ಇರಿದಿದ್ದಾನೆ, ಗಂಭೀರವಾಗಿ ಗಾಯಗೊಂಡಿದ್ದ ವಿಕ್ರಂನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಪೊಲೀಸರು ಆರೋಪಿ ವಸೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.