ಆಕೆಯ ದೇಹದಲ್ಲಿತ್ತು 3 ಕೋಟಿ ಮೌಲ್ಯದ ಮಾದಕ ದ್ರವ್ಯ: ಉಗಾಂಡಾ ಪ್ರಜೆಯೊಬ್ಬಳನ್ನು ಬಂಧಿಸಿದ ಮುಂಬೈ ಎನ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
3 ಕೋಟಿ ಮೌಲ್ಯದ ಅಕ್ರಮ ಮಾದಕ ದ್ರವ್ಯಗಳಾದ ಹೆರಾಯಿನ್‌ ಮತ್ತು ಕೋಕೇನ್‌ ಗಳನ್ನು ದೇಹದೊಳಗೆ ತುಂಬಿಕೊಂಡು ಬಂದ ಉಗಾಂಡಾ ಪ್ರಜೆಯೊಬ್ಬಳನ್ನು ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.

ಮೂಲಗಳ ವರದಿಯ ಪ್ರಕಾರ ಆಕೆಯ ದೇಹದಲ್ಲಿದ್ದ 535 ಗ್ರಾಂ ಹೆರಾಯಿನ್ ಮತ್ತು 175 ಗ್ರಾಂ ಕೊಕೇನ್ ತುಂಬಿದ್ದ 64 ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಹೆಚ್ಚಿನ ಕ್ಯಾಪುಲ್‌ ಗಳನ್ನು ಹೊರತೆಗೆಯಲು ಆಕೆಯನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ. 28 ರಂದು ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಕೆಯ ವಸ್ತಗಳಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ. ಆಧರೆ ಹೆಚ್ಚಿನ ತನಿಖೆ ವೇಳೆ ಅವಳ ದೇಹಕ್ಕೆ ಅಂಟಿಕೊಂಡಿದ್ದ 11 ಕ್ಯಾಪ್ಸೂಲ್‌ಗಳು ಪತ್ತೆಯಾಗಿದ್ದವು. ನಂತರ ಜೂ.2ರವೆಗೆ ಆಕೆಯನ್ನು ಜೆಜೆ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಪರೀಕ್ಷೆಗೊಳಪಡಿಸಿದಾಗ ಆಕೆಯ ದೇಹದೊಳಗೆ ಇನ್ನೂ 54 ಕ್ಯಾಪ್ಸೂಲ್‌ ಗಳಿರುವುದು ಪತ್ತೆಯಾಗಿದೆ. ಇವುಗಳ ಮಾರುಕಟ್ಟೆ ಮೌಲ್ಯ 3 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!