ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಟ್ಟಿದ ಮೂರು ದಿನಗಳಲ್ಲೇ ಆಸ್ಪತ್ರೆಯ ಬೆಡ್ ಮೇಲೆ ಮಗು ತೆವಳುತ್ತಿರುವುದನ್ನು ಕಂಡು ತಾಯಿ ಬೆಚ್ಚಿಬಿದ್ದರು. ಈ ರೀತಿ ಹಿಂದೆಂದೂ ಕಂಡಿರಲಿಲ್ಲ ಎಂದು ಮಗುವಿನ ತಾಯಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಮೆರಿಕದ ಪೆನ್ಸಿಲ್ವೇನಿಯಾ ನಿವಾಸಿ 34 ವರ್ಷದ ಸಮಂತಾ ಮಿಚೆಲ್ ಎಂಬಾಕೆಗೆ ಜನಿಸಿದ ಮೂರು ದಿನದ ಮಗುವಿನ ವೀಡಿಯೋ ಇದೀಗ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಮಗು ಹುಟ್ಟಿದ ಮೂರು ದಿನಗಳಿಗೆ ತನ್ನ ತಲೆಯನ್ನು ಎತ್ತಿ ಹಾಸಿಗೆಯ ಮೇಲೆ ತೆವಳುತ್ತಿರುವುದನ್ನು ಕಂಡು ಸಮಂತಾ ಆಶ್ಚರ್ಯಚಕಿತರಾದರು.
ನೈಲಾಗೆ ಈಗ ಮೂರು ತಿಂಗಳು. ಅವಳು ಇತರ ಹುಡುಗಿಯರಿಗಿಂತ ಭಿನ್ನವಾಗಿ ಬೆಳೆಯುತ್ತಿದ್ದಾಳೆ. ತಾಯಿ ಮಿಚೆಲ್ ಅವರು ಶೀಘ್ರದಲ್ಲೇ ನಡೆಯಲು ಸಾಧ್ಯವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ‘ಅವಳು ಬೇಗ ನಡೆಯುವುದರಲ್ಲಿ ಸಂಶಯವಿಲ್ಲ’ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.