ನಕಲಿ ಮದ್ಯ ಸೇವನೆ: ಮೂವರ ದಾರುಣ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಮಿಳುನಾಡಿನ ಮರಕ್ಕನಂನಲ್ಲಿ ನಡೆದಿದೆ.

ನಕಲಿ ಮದ್ಯವನ್ನು ಸೇವಿಸಿ ಸುರೇಶ್, ಶಂಕರ್ ಮತ್ತು ರಾಣಿವೇಲ್ ಎನ್ನುವವರು ಮೃತಪಟ್ಟಿದ್ದು, ಪುದುಚೇರಿಯ ಐಪಿಎಂಇಆರ್ ಆಸ್ಪತ್ರೆಯಲ್ಲಿ ಇತರ 10 ಮಂದಿ ದಾಖಲಾಗಿದ್ದಾರೆ., ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಸದ್ಯ ನಕಲಿ ಮದ್ಯದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಆಡಳಿತ ಪಕ್ಷವನ್ನು ವ್ಯಂಗ್ಯ ಮಾಡಿದ್ದಾರೆ. ಇದು ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರದ “ಆಡಳಿತಾತ್ಮಕ ಅಸಮರ್ಥತೆ” ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಐಎಡಿಎಂಕೆ ಆಡಳಿತದಲ್ಲಿ ನಕಲಿ ಮದ್ಯ ಮಾರಾಟವನ್ನು ರದ್ದುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಈ ಹಾವಳಿ ಮತ್ತೆ ರಾಜ್ಯದಲ್ಲಿ ಶುರುವಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!