3 ಗಂಟೆಗಳ ಕಾರ್ಯಾಚರಣೆ: ಕೊನೆಗೂ ತಾಯಿ- ಪುಟ್ಟ ಮರಿ ಆನೆಯ ರಕ್ಷಣೆ! (ವಿಡಿಯೋ ವೈರಲ್)

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಥೈಲ್ಯಾಂಡ್‌ನ ಪಶುವೈದ್ಯರ ತಂಡದ ಸುದೀರ್ಘ 3 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ತಾಯಿ ಮತ್ತು ಮರಿ ಆನೆಯನ್ನು ರಕ್ಷಿಸಿರುವ ವಿಡಿಯೋ ಇದಾಗಿದೆ.

ಥಾಯ್ಲೆಂಡ್‌ನ ನಖೋನ್ ನಯೋಕ್ ಪ್ರಾಂತ್ಯದಲ್ಲಿ, ಚಂಡಮಾರುತದ ಸಮಯದಲ್ಲಿ 7 ಅಡಿ ಆಳದ ಗುಂಡಿಯೊಂದು ಸಂಪೂರ್ಣವಾಗಿ ಹುಲ್ಲು ಬೆಳೆದು ಮುಚ್ಚಿ ಹೋಗಿತ್ತು. ಆದರೆ ಆ ಗುಂಡಿಯ ಅರಿಯದೇ ಪುಟ್ಟ ಮರಿ ಆನೆ ಹಾಗೂ ಅದನ್ನು ರಕ್ಷಿಸಲು ಹೋದ ತಾಯಿ ಆನೆ ಬಿದ್ದು ಒಳಗೆ ಸಿಕ್ಕಿ ಹಾಕಿಕೊಂಡಿದೆ.

ಈ ವಿಷಯ ಅರಿತ ಪಶುವೈದ್ಯರು ತಂಡ ಭಾರೀ ಮಳೆಯ ಮಧ್ಯೆಯೂ ಸುಮಾರು 3 ಗಂಟೆಗಳ ನಂತರ ಕೂಡ ತಾಯಿ ಹಾಗೂ ಮರಿಯಾನೆಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ.

ತಾಯಿ ಆನೆ ಪ್ರಜ್ಞೆ ತಪ್ಪಿದ್ದರಿಂದ ಕೆಲಹೊತ್ತಿನ ವರೆಗೆ ಸಿಪಿಆರ್ ನೀಡಲಾಗಿತ್ತು. ಬಳಿಕ ತಾಯಿ ಮತ್ತು ಮರಿ ರಸ್ತೆ ದಾಟಿ ಅರಣ್ಯಕ್ಕೆ ಸಾಗಿಹೋಗಿದೆ.
ಈ ದೃಶ್ಯಗಳು ವಿಡಿಯೋದಲ್ಲಿಸೆರೆಯಾಗಿದೆ.

@TheFigen ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಾಯಿ ಮತ್ತು ಮರಿಯಾನೆಯನ್ನು ರಕ್ಷಿಸಿದ ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗೆ ದೇವರು ಸದಾ ಆಶೀರ್ವದಿಸಲಿ ಎಂದು ಕ್ಯಾಪ್ಷನ್​​​ನಲ್ಲಿ ಬರೆಯಲಾಗಿದೆ.

ಈ ವೈರಲ್ ವಿಡಿಯೋ ಇದೀಗಾಗಲೇ 8.796 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 4 ಸಾವಿರಕ್ಕಿಂತಲೂ ಹೆಚ್ಚು ರಿಟ್ವೀಟ್‌ಗಳು, 20 ಸಾವಿರ ಲೈಕ್​​ಗಳು ಮತ್ತು 426 ಬುಕ್‌ಮಾರ್ಕ್‌ಗಳನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!