ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕರ ಸಂಕ್ರಾಂತಿ ಪ್ರಯುಕ್ತ ಗಂಗಾ ನದಿ ಹಾಗೂ ಬಂಗಾಳಕೊಲ್ಲಿಯ ಸಂಗಮದಲ್ಲಿ ಯಾತ್ರಿಕರು ಪವಿತ್ರ ಸ್ನಾನ ಮಾಡಲಿದ್ದಾರೆ. ಗಂಗಾಸಾಗರ ಮೇಳದಲ್ಲಿ ಭಾಗಿಯಾಗುವ 3 ಲಕ್ಷ ಕ್ಕೂ ಹೆಚ್ಚು ಜನರಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.
ಇಂದು ಮುಂಜಾನೆ ಇಂದಲೇ ಭಕ್ತರು ಪವಿತ್ರ ಗಂಗೆ ಸಂಗಂದಲ್ಲಿ ಸ್ನಾನ ಮಾಡಲು ಬರುತ್ತಿದ್ದಾರೆ. ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಭೀತಿಯಿಂದ ಸರ್ಕಾರ 3 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಪರೀಕ್ಷೆ ಮಾಡಿದೆ. ಈ ಪೈಕಿ ಶೇ.0.63 ಮಂದಿಗೆ ಕೋವಿಡ್ ತಗುಲಿದೆ.
ಅಲ್ಲಿನ ಸರ್ಕಾರ ಭಕ್ತರಿಗೆ ಹಾಗೂ ಸೋಂಕಿತರಿಗೆ ಅಗತ್ಯ ತುರ್ತು ಚಿಕಿತ್ಸೆ ನೀಡಲು ಮತ್ತು ಗಂಗಾಸಾಗರದಿಂದ ಆಸ್ಪತ್ರೆಗಳಿಗೆ ಜನರನ್ನು ಸ್ಥಳಾಂತರಿಸಲು ಏರ್ ಆಂಬ್ಯುಲೆನ್ಸ್ ಸೇವೆಯನ್ನು ಸ್ಥಾಪಿಸಿದೆ.
ಕೋವಿಡ್ ಮಾರ್ಗಸೂಚಿ ಪಾಲಿಸಿ, ಜನದಟ್ಟನೆ ಸೇರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕಲ್ಕತ್ತಾ ಹೈಕೋರ್ಟ್ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಸ್ಥಳದಲ್ಲಿ ಬಂಗಾಳ ಸಚಿವ ಅನೂಪ್ ಬಿಸ್ವಾನ್ ಹಾಗೂ ಶಶಿ ಪಂಜ ಅವರು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ.