ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿ ನಡೆಸಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕರು, ಘಟನೆಗೆ ಎರಡು ದಿನಗಳ ಮೊದಲು ಬೈಸರನ್ ಕಣಿವೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ದಾಳಿಗೆ ಸಂಬಂಧಿಸಿದಂತೆ ಬಂಧಿತ ಓವರ್ ಗ್ರೌಂಡ್ ವರ್ಕರ್‌ಗಳಲ್ಲಿ ಒಬ್ಬರ ವಿಚಾರಣೆಯ ಸಮಯದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರು ಏಪ್ರಿಲ್ 15 ರಂದು ಪಹಲ್ಗಾಮ್ ತಲುಪಿದರು ಮತ್ತು ಸುಂದರವಾದ ಬೈಸರನ್ ಕಣಿವೆ ಸೇರಿದಂತೆ ಕನಿಷ್ಠ ನಾಲ್ಕು ಸ್ಥಳಗಳನ್ನು ಉಗ್ರರು ತಮ್ಮ ಹಿಟ್ ಲಿಸ್ಟ್ ನಲ್ಲಿ ಇರಿಸಿಕೊಂಡಿದ್ದರು.
ಇತರ ಮೂರು ಸಂಭಾವ್ಯ ಗುರಿಗಳೆಂದರೆ ಅದು ಅರು ಕಣಿವೆ, ಸ್ಥಳೀಯ ಮನೋರಂಜನಾ ಉದ್ಯಾನವನ ಮತ್ತು ಬೇತಾಬ್ ಕಣಿವೆ ಭಯೋತ್ಪಾದಕರ ಕಣ್ಗಾವಲಿನಲ್ಲಿವೆ. ಈ ವಲಯಗಳಲ್ಲಿ ಹೆಚ್ಚಿದ ಭದ್ರತಾ ವ್ಯವಸ್ಥೆಗಳು ಭಯೋತ್ಪಾದಕರು ಅಲ್ಲಿ ದಾಳಿ ನಡೆಸುವುದನ್ನು ತಡೆಯಿತು ಎಂದು ಮೂಲಗಳು ಹೇಳುತ್ತವೆ.
ಪೆಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಸಂಘಟಿತ ದಾಳಿಗಳನ್ನು ನಡೆಸಿವೆ. ವಿವಿಧ ಹುರಿಯತ್ ಕಾನ್ಫರೆನ್ಸ್ ಬಣಗಳು ಮತ್ತು ಜಮಾತ್-ಇ-ಇಸ್ಲಾಮಿಯಂತಹ ನಿಷೇಧಿತ ಸಂಘಟನೆಗಳ ಸದಸ್ಯರು ಮತ್ತು ಸಹಾನುಭೂತಿದಾರರಿಗೆ ಸಂಬಂಧಿಸಿದ ನಿವಾಸಗಳನ್ನು ಕುಪ್ವಾರಾ, ಹಂದ್ವಾರ, ಅನಂತ್‌ನಾಗ್, ಟ್ರಾಲ್, ಪುಲ್ವಾಮಾ, ಸೋಪೋರ್, ಬಾರಾಮುಲ್ಲಾ ಮತ್ತು ಬಂಡಿಪೋರಾ ಸೇರಿದಂತೆ ಅನೇಕ ಸ್ಥಳಗಳಲ್ಲಿ ಶೋಧಿಸಲಾಗಿದೆ.