ಸೆಪ್ಟೆಂಬರ್‌ ತಿಂಗಳ ಯುಪಿಐ ವಹಿವಾಟುಗಳಲ್ಲಿ 3 ಪ್ರತಿಶತ ಹೆಚ್ಚಳ: ಎನ್‌ಪಿಸಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೆಪ್ಟೆಂಬರ್‌ ತಿಂಗಳಲ್ಲಿ ಯುಪಿಐ ವಹಿವಾಟುಗಳಲ್ಲಿ 3 ಪ್ರತಿಶತದಷ್ಟು ಹೆಚ್ಚಾಗಿದ್ದು ವಹಿವಾಟು 6.78 ಶತಕೋಟಿಗೆ ತಲುಪಿದೆ ಎಂದು NPCI ಯ ಅಂಕಿಅಂಶಗಳು ತೋರಿಸಿವೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ದತ್ತಾಂಶದ ಪ್ರಕಾರ, ಕಳೆದ ತಿಂಗಳು 11.16 ಲಕ್ಷ ಕೋಟಿ ರೂ. ಮೌಲ್ಯದ 6.78 ಶತಕೋಟಿ (678 ಕೋಟಿ) ವಹಿವಾಟುಗಳು ನಡೆದಿವೆ. ಆಗಸ್ಟ್‌ನಲ್ಲಿ 10.73 ಲಕ್ಷ ಕೋಟಿ ರೂ. ಮೌಲ್ಯದ ಹಾಗೂ ಜುಲೈನಲ್ಲಿ 10.62 ಲಕ್ಷ ಕೋಟಿ ಮೌಲ್ಯದ 6.28 ಬಿಲಿಯನ್ UPI ವಹಿವಾಟುಗಳನ್ನು ನಡೆದಿವೆ.

ಇದು ಬಳಸಲು ಸರಳವಾಗಿದ್ದು ವೇಗದ ಮತ್ತು ಸುರಕ್ಷಿತ ಪಾವತಿ ವಿಧಾನವಾಗಿದೆ ಆದ್ದರಿಂದ ಆನ್‌ಲೈನ್‌ ವಹಿವಾಟು ನಡೆಸುವ ಬಳಕೆದಾರರು ಯುಪಿಐ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. NCPI ವ್ಯವಸ್ಥೆಯಡಿಯಲ್ಲಿ ಇತರ ಪಾವತಿ ವಿಧಾನಗಳಾದ IMPS ಮೂಲಕ ತ್ವರಿತ ಅಂತರ-ಬ್ಯಾಂಕ್ ಪಾವತಿಗಳು ಸೆಪ್ಟೆಂಬರ್‌ನಲ್ಲಿ 462.69 ಮಿಲಿಯನ್ (46.27 ಕೋಟಿ) ಯಷ್ಟಾಗಿದ್ದು ಇದು ಹಿಂದಿನ ತಿಂಗಳ 466.91 ಮಿಲಿಯನ್ (46.69 ಕೋಟಿ) ಗಿಂತ ಕಡಿಮೆಯಾಗಿದೆ. ಜುಲೈನಲ್ಲಿ ಇದು 460.83 ಮಿಲಿಯನ್ (46.03 ಕೋಟಿ) ಆಗಿತ್ತು.

ಆಧಾರ್ ಸಂಖ್ಯೆ ಆಧಾರಿತ AePS ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ 102.66 ಮಿಲಿಯನ್ ಗಳಷ್ಟಾಗಿದ್ದು ಒಂದು ತಿಂಗಳ ಹಿಂದೆ 105.65 ಮಿಲಿಯನ್ ಆಗಿತ್ತು. ಜುಲೈನಲ್ಲಿ, 110.48 ಮಿಲಿಯನ್ ಎಇಪಿಎಸ್ ವಹಿವಾಟುಗಳು ನಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!