ಬಿಎಂಟಿಸಿ ಬಸ್‌ ಹರಿದು ಮೂರು ವರ್ಷದ ಮಗು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.

ಗಾರೇಪಾಳ್ಯ ಜಂಕ್ಷನ್ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೃತ ಮಗುವನ್ನು ಅಯಾನ್ (3) ಎಂದು ಗುರುತಿಸಲಾಗಿದೆ.

ಅಯಾನ್, ದೊಡ್ಡಮ್ಮನ ಜೊತೆ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದ. ಈ ವೇಳೆ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದು, ಕೂಡಲೇ ಮಗು ಕೆಳಗಡೆ ಬಿದ್ದಿದೆ. ಮಗು ಕೆಳಗಡೆ ಬಿಳುತ್ತಿದ್ದಂತೆ ಬಿಎಂಟಿಸ್ ಬಸ್ ಚಕ್ರ ಮಗುವಿನ ತಲೆಯ ಮೇಲೆ ಹರಿದಿದೆ. ಇದರ ಪರಿಣಾಮ ಆಯಾನ್​ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾನೆ.

ಈ ಬಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಬಿಎಂಟಿಸಿ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!