ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀಚ್ ರೆಸ್ಟೋರೆಂಟ್‌ಗಳಲ್ಲಿ ಈ ಮೆನ್ಯು ಕಡ್ಡಾಯ, ದೇಶ-ವಿದೇಶದಲ್ಲಿಯೂ ಈ ಮೆನ್ಯುವಿಗೆ ಆದ್ಯತೆ ಸಿಗಬೇಕು ಎಂದು ಗೋವಾ ಸರ್ಕಾರ ಹೇಳಿದೆ.
ಮೆನ್ಯು ಯಾವುದು ಗೊತ್ತಾ? ಫಿಶ್ ಕರ್ರಿ-ರೈಸ್! ಹೌದು, ಮೀನು ಕರ್ರಿ ಹಾಗೂ ರೈಸ್‌ನ್ನು ಎಲ್ಲಾ ಬೀಚ್ ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ತಯಾರಿಸಬೇಕು.
ಗೋವಾದ ಫಿಶ್ ಕರ್ರಿ ಹಾಗೂ ರೈಸ್ ದೇಶ ವಿದೇಶಗಳಲ್ಲಿಯೂ ಹೆಸರು ಮಾಡಬೇಕು ಎಂದು ಗೋವಾ ಸರ್ಕಾರ ಈ ನಿರ್ಧಾರವನ್ನು ಕೈಗೊಂಂಡಿದೆ.
ಗೋವಾದ ರೆಸ್ಟೋರೆಂಟ್‌ಗಳಲ್ಲಿ ಎಲ್ಲ ರೀತಿಯ ಕ್ಯುಸೀನ್‌ಗೆ ಮಹತ್ವ ನೀಡಲಾಗುತ್ತದೆ. ಆದರೆ ಗೋವಾದ ಲೋಕಲ್ ಆಹಾರಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ರಾಜ್ಯದ ಶ್ರೀಮಂತ ಪಾಕವಿಧಾನ ಜಗತ್ತಿನೆಲ್ಲೆಡೆ ಹರಡಲಿ ಎಂದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.