ರಷ್ಯಾದಿಂದ ಭೀಕರ ರಾಕೆಟ್‌ ದಾಳಿ; 30 ಉಕ್ರೇನಿಯನ್ನರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ ಒಂದೂವರೆ ತಿಂಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಕಾಳಗ ನಡೆಯುತ್ತಿದೆ. ಈಗಾಗಲೇ ಲೆಕ್ಕವಿಲ್ಲದಷ್ಟು ಸಾವು ನೋವುಗಳು ಸಂಭವಿಸಿದೆ. ಆದರೂ ಉಕ್ರೇನ್‌ ಮೇಲೆ ತನ್ನ ಹಿಡಿತವ್ನು ಸಾಧಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಇಂದೂ ಕೂಡ ಉಕ್ರೇನ್‌ ಮೇಲೆ ಬಾಂಬ್ ದಾಳಿ ಮಾಡಿದೆ. ಪೂರ್ವ ಉಕ್ರೇನ್ ಅನ್ನು ಗುರಿಯಾಗಿರಿಸಿಕೊಂಡು ರೈಲ್ವೆ ನಿಲ್ದಾಣದ ಮೇಲೆ ರಾಕೆಟ್ ದಾಳಿ ನಡೆಸಿದೆ. ನಿರಾಶ್ರಿತರನ್ನು ಸ್ಥಳಾಂತರಿಸುವ ರೈಲ್ವೆ ನಿಲ್ದಾಣದ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ 30ಜನ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರತಿಯಾಗಿ ಉಕ್ರೇನ್‌ ಕೂಡ ತನ್ನ ರಷ್ಯಾ ಹತ್ತಿಕ್ಕಲು ಸತತ ಪ್ರಯತ್ನ ನಡೆಸುತ್ತಿದೆ. ರಷ್ಯಾದ ಅನೇಕ ಸೈನಿಕರು ಯುದ್ಧದಲ್ಲಿ ಕೊಲ್ಲಲ್ಪಟ್ಟರು ಎಂದು ಉಕ್ರೇನಿಯನ್ ಸೇನೆ ಪದೇ ಪದೇ ಸ್ಪಷ್ಟಪಡಿಸುತ್ತಿದೆ. ಸೇನಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ 18,900 ರಷ್ಯಾದ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನಿಯನ್ ಸೇನೆಯು ಗುರುವಾರ ಘೋಷಣೆ ಮಾಡಿದೆ. ಜೊತೆಗೆ, 698 ಯುದ್ಧ ಟ್ಯಾಂಕ್‌ಗಳು, 1891 ಶಸ್ತ್ರಸಜ್ಜಿತ ವಾಹನಗಳು, 150 ಯುದ್ಧವಿಮಾನಗಳು, 135 ಹೆಲಿಕಾಪ್ಟರ್‌ಗಳು ಮತ್ತು 111 ಯುಎವಿಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ ಹೇಳಿದೆ. ಇಷ್ಟೇ ಅಲ್ಲದೆ 7 ಹಡಗುಗಳು, 55 ವಿಮಾನಗಳು ಮತ್ತು ಕ್ಷಿಪಣಿ ವಿಧ್ವಂಸಕಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್‌ ಸೇನ್‌ ಹೇಳಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!