ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತೀಯ ರೈಲ್ವೆಯು ಸುಮಾರು 303 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಮೂಲಸೌಕರ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳುವುದಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ರೈಲ್ವೆ ಇಲಾಖೆಯು ಹೊರಡಿಸಿರುವ ಪ್ರಕಟಣೆಯ ಅನುಸಾರ ಇದೇ ಕಾರಣಕ್ಕಾಗಿ ಇನ್ನೂ 60 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಈಗಾಗಲೇ ಐಆರ್‌ಸಿಟಿಸಿ ವೆಬ್‌ಸೈಟ್ ಅನ್ನು ಬಳಸಿ ಕಾಯ್ದಿರಿಸಿದ ಟಿಕೆಟ್ ಅನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗೆ ಮರುಪಾವತಿಯನ್ನು ಮಾಡಲಾಗುತ್ತದೆ. ಆಫ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕಿರುತ್ತದೆ.