ದಿನಭವಿಷ್ಯ | ಖರ್ಚಿನಲ್ಲಿ ಹಿತಮಿತ ಸಾಧಿಸಿ, ಉದ್ಯೋಗ ಬದಲಾವಣೆಗೆ ಕಾಲ ಪಕ್ವವಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಆರೋಗ್ಯದ ಸಮಸ್ಯೆ ತುಸು ಕಾಡಬಹುದು. ಆದರೆ ಆ ಕುರಿತಂತೆ ಅನವಶ್ಯ ಭೀತಿ ಬೇಡ. ಆರ್ಥಿಕ ಬಿಕ್ಕಟ್ಟು ತಾನಾಗಿ ಪರಿಹಾರ ಕಾಣುವುದು.

ವೃಷಭ
ಆರ್ಥಿಕ ಸಂಕಷ್ಟ ಕಾಡುವುದು. ಖರ್ಚಿನಲ್ಲಿ ಹಿತಮಿತ ಸಾಧಿಸಿ. ಉದ್ಯೋಗ ಬದಲಾವಣೆಗೆ ಕಾಲ ಪಕ್ವವಾಗಿಲ್ಲ. ಕೌಟುಂಬಿಕ ಒತ್ತಡ.

ಮಿಥುನ
ಕುಟುಂಬದಲ್ಲಿ ಮೂಡಿರುವ ಭಿನ್ನಮತ ವನ್ನು ನಿರ್ಲಕ್ಷಿಸಬೇಡಿ. ಬೇಗನೆ ಅದನ್ನು ಶಮನಗೊಳಿಸಿ. ಉದ್ಯಮಿಗಳಿಗೆ ಆರ್ಥಿಕ ಲಾಭ ದೊರಕಲಿದೆ.

ಕಟಕ
ಕ್ರಿಯಾತ್ಮಕ ಚಟುವಟಿಕೆ ಗಳಲ್ಲಿ ತೊಡಗಲು ಸಕಾಲ. ಧನಲಾಭ. ಉಳಿತಾಯಕ್ಕೆ ಆದ್ಯತೆ ಕೊಡಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ಸಿಂಹ
ವೃತ್ತಿಯಲ್ಲಿ ಹೆಚ್ಚು ಒತ್ತಡ. ಕೆಲವರು ತಮ್ಮ ಹೊಣೆಗಾರಿಕೆಯನ್ನು ನಿಮ್ಮ ಮೇಲೆ ಜಾರಿಸುತ್ತಾರೆ. ಮನೆಯಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು.

ಕನ್ಯಾ
ವೃತ್ತಿಯಲ್ಲಿ ಎಲ್ಲರ ಗಮನ ನಿಮ್ಮೆಡೆಗೆ. ಬಹುಶಃ ನಿಮ್ಮ ಕಾರ್ಯ ಸಾಮರ್ಥ್ಯ ಎಲ್ಲರ ಗಮನಕ್ಕೆ ಬರುತ್ತದೆ. ಕೆಲವರು ಅಸೂಯೆ ತೋರಬಹುದು.

ತುಲಾ
ಇತರರ ಒಳಿತಿಗೆ ನಿಮ್ಮ ಪ್ರಯತ್ನ ನಡೆಸುವಿರಿ. ಆಪ್ತರು ನಿಮ್ಮ ಜತೆ ಮುನಿಸಿಕೊಂಡಾರು. ಅವರೊಡನೆ ಹೊಂದಾಣಿಕೆ ಸಾಧಿಸಿ. ಸಂಘರ್ಷ ಬೇಡ.

ವೃಶ್ಚಿಕ
ಕೆಲಸದ ಮೇಲೆ ಹೆಚ್ಚು ಗಮನ ಕೊಡುವುದು ಅಗತ್ಯ. ಇಲ್ಲವಾದರೆ ನಿಮ್ಮಿಂದ ಪ್ರಮಾದಗಳು ಆಗಬಹುದು. ಮನೆಯಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ.

ಧನು
ವೃತ್ತಿ ಕಾರ್ಯಗಳಿಗೆ ಅದೃಷ್ಟ ಒದಗಲಿದೆ. ಸಹೋದ್ಯೋಗಿಗಳ ಸಹಕಾರ. ಟೀಕೆಗಳನ್ನು ಸ್ಫೂರ್ತಿಯಿಂದ ಸ್ವೀಕರಿಸಿ. ತಪ್ಪುಗಳನ್ನು ತಿದ್ದಿಕೊಳ್ಳಿ.

ಮಕರ
ಸಂವಹನದ ಕೊರತೆಯಿಂದ ಕೆಲವರ ಜತೆ ತಪ್ಪಭಿಪ್ರಾಯ ಮೂಡಬಹುದು. ವಿರಾಮ ತೆಗೆದು ಕೊಂಡು ಮನೆಯಲ್ಲಿ ಕೂರಲು ಬಯಸುವಿರಿ.

ಕುಂಭ
ನಿಮ್ಮ ಕಠಿಣ ದುಡಿಮೆಗೆ ಸೂಕ್ತ ಪ್ರತಿಫಲ ದೊರಕುವ ದಿನವಿದು. ಸಂಗಾತಿ ಜತೆಗೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕೌಟುಂಬಿಕ ಶಾಂತಿ.

ಮೀನ
ಕೌಟುಂಬಿಕ ಉದ್ವಿಗ್ನತೆ. ಮನಸ್ಸಿನಲ್ಲಿ  ಆತಂಕ, ತಲ್ಲಣ. ಹಲವಾರು ಕಾರ್ಯಗಳು ಅಪೂರ್ಣವಾಗಿ ಉಳಿಯುತ್ತವೆ. ಆರ್ಥಿಕ ಅಡಚಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!