73ನೇ ವಯಸ್ಸಿನಲ್ಲಿ ಬರೋಬ್ಬರಿ 31 ಕೋಟಿ ರೂ. ಗೆದ್ದ ವೃದ್ಧೆ, ಅಬ್ಬಬ್ಬಾ ಲಾಟರಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾತ್ರೋರಾತ್ರಿ ಮಿಲಿಯನೇರ್ ಆದ ಅನೇಕ ಜನರು ಜಗತ್ತಿನಲ್ಲಿದ್ದಾರೆ. ಲಾಟರಿಯಿಂದ ಇದೆಲ್ಲವೂ ಸಾಧ್ಯವಾಗಿದೆ. ಹೌದು, ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಬಂದರೆ ಬಡವನೂ ಕೂಡ ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಇದೀಗ 73ನೇ ವಯಸ್ಸಿನಲ್ಲಿ ಲಾಟರಿಯಲ್ಲಿ ಬರೋಬ್ಬರಿ 31 ಕೋಟಿ ರೂ. ಗೆದ್ದ ವೃದ್ಧೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾರೆ.

ಈ ಮಹಿಳೆಯ ಹೆಸರು ರೋಸ್ ಡಾಯ್ಲ್. ಅವರಿಗೆ 73 ವರ್ಷ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ವಾಸಿಸುತ್ತಿದ್ದಾರೆ. ಮೆಟ್ರೋ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರೋಸ್ ತನ್ನ ಪತಿ ಮತ್ತು ಮಕ್ಕಳೊಂದಿಗೆ 44 ವರ್ಷಗಳಿಂದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿಲ್ಲ, ಆದ್ದರಿಂದ ಈ ವಯಸ್ಸಿನಲ್ಲಿ ಎರಡು ಕೆಲಸಗಳನ್ನು ಮಾಡುತ್ತಿದ್ದಾರೆ. ವಿಮಾ ಕಂಪನಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ನಂತರ ಶಾಲೆಗಳಲ್ಲಿ ಮಕ್ಕಳಿಗೆ ಅಡುಗೆ ಮಾಡಿ ಕೊಡುವ ಕೆಲಸ ಮಾಡುತ್ತಿದ್ದಾರೆ.

ಆದರೆ ಈ ಅದೃಷ್ಟದ ಡ್ರಾದಲ್ಲಿ ರೋಸ್ ಸುಮಾರು 31 ಶತಕೋಟಿ ಗೆದ್ದಿದ್ದಾರೆ. ಉಡುಗೊರೆಯಾಗಿ, ಅವರು ಕಾರ್ನ್‌ವಾಲ್‌ನಲ್ಲಿ ಐಷಾರಾಮಿ ಮನೆಯನ್ನು ಪಡೆಡಿದ್ದಾರೆ. ಈ ಮನೆಯು ಅನೇಕ ಸೌಲಭ್ಯಗಳನ್ನು ಹೊಂದಿದೆ.

ಇಷ್ಟು ದೊಡ್ಡ ಬಹುಮಾನ ಗೆಲ್ಲುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಈ ಹಿಂದೆ ಹಲವು ಬಾರಿ ಲಾಟರಿಯಲ್ಲಿ ಹಣ ಹೂಡಿಕೆ ಮಾಡಿದ್ದೇನೆ ಆದರೆ ಯಾವುದನ್ನೂ ಗೆದ್ದಿಲ್ಲ. ಈ ಅದ್ಭುತ ಬಹುಮಾನ ನನ್ನ ಜೀವನವನ್ನು ಬದಲಾಯಿಸಿತು ಎಂದು ರೋಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!