ಸೇನಾ ನೇಮಕಾತಿ ಅಭಿಯಾನದ ವೇಳೆ ಕಾಲ್ತುಳಿತ: 31 ಮಂದಿ ಸಾವು, 140 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೇನಾ ನೇಮಕಾತಿ ಅಭಿಯಾನದ ವೇಳೆ ಕಾಲ್ತುಳಿತದಿಂದಾಗಿ 31 ಮಂದಿ ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಬ್ರ್ಯಾಝಾವಿಲ್ಲೆಯ ಸ್ಟೇಡಿಯಂನಲ್ಲಿ ನಡೆದಿದೆ.

ಒರ್ನಾನೊ ಕ್ರೀಡಾಂಗಣದಲ್ಲಿ ನ.14ರಿಂದ ಸೇನಾ ನೇಮಕಾತಿ ಆಂದೋಲನ ನಡೆಯುತ್ತಿದ್ದು, ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ.

ನೂಕುನುಗ್ಗಲಿನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಮಾಧ್ಯಮಗಳಲ್ಲಿ ವರಿಯಾಗಿದೆ. ಈ ಘಟನೆಯಿಂದಾಗಿ ನೇಮಕಾತಿ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದ್ದು, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಗಿದೆ.

ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಉದ್ಯೋಗ ನೀಡುವ ಕೆಲವೇ ಸಂಸ್ಥೆಗಳಲ್ಲಿ ಒಂದಾದ ಸೇನೆಗೆ ಸೇರಲು ಸಾಲುಗಟ್ಟಿ ನಿಂತಿದ್ದ 18 ರಿಂದ 25 ವರ್ಷ ವಯಸ್ಸಿನ ಉತ್ಸಾಹಿ ಯುವಕರಿಂದ ಕಾಲ್ತುಳಿತ ಉಂಟಾಗಿದೆ. ಈ ಘಟನೆಯ ಕುರಿತಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಒಕೊ ನ್ಗಾಕಲಾ ಅವರು ತಡರಾತ್ರಿಯವರೆಗೂ ಏಕೆ ಆಂದೋಲನ ನಡೆಯುತ್ತಿತ್ತು ಎಂಬುದರ ಬಗ್ಗೆ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!