ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವೈಯಾಲಿಕಾವಲ್ ಮನೆಯಲ್ಲಿ ನೆಲೆಸಿದ್ದ ಮಹಾಲಕ್ಷ್ಮೀ ಎಂಬಾಕೆಯನ್ನು ಕೊಲೆ ಮಾಡಿದ ಆರೋಪಿ ಆಕೆಯ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ 32 ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದು, ಇದೀಗ ಈ ಕುರಿತು ಒಂದೊಂದು ಭಯಾನಕ ಸತ್ಯ ಹೊರಬರುತ್ತಿದೆ.
ವೈಯಾಲಿಕಾವಲ್ ಮನೆಯ ಫಸ್ಟ್ ಫ್ಲೋರ್‌ನಲ್ಲಿ ಮರ್ಡ*ರ್ ವಾಸನೆ ಅಕ್ಕಪಕ್ಕದ ಮನೆಯವರ ಮೂಗಿಗೆ ಬಡಿದಿತ್ತು. ನೆರೆಮನೆಯವರು ಮಹಾಲಕ್ಷ್ಮೀ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಇಂತಹದೊಂದು ಮರ್ಡರ್ ಊಹಿಸಿಕೊಳ್ಳೋದು ಸಾಧ್ಯವಿರಲಿಲ್ಲ. ಇದೀಗ ಈ ಪ್ರಕರಣದ ಬೆನ್ನತ್ತಿರುವ ಪೊಲೀಸರು ಹಾಗೂ ವೈದ್ಯರಿಗೆ ಈ ಪ್ರಕರಣ ಕಗ್ಗಂಟಾಗಿದೆ.
ಮಹಾಲಕ್ಷ್ಮಿ ಬರ್ಬರ ಹತ್ಯೆಯ ಸುದ್ದಿ ತಿಳಿದ ಕುಟುಂಬಸ್ಥರು ಪೊಲೀಸರಿಗೆ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ. ಮಹಾಲಕ್ಷ್ಮಿ ಗಂಡ ಹಾಗೂ ಕುಟುಂಬಸ್ಥರು ಉತ್ತರಾಖಂಡ್ ಮೂಲದ ಅಶ್ರಫ್ ಎಂಬಾತನ ವಿರುದ್ದ ದೂರು ನೀಡಿದ್ದಾರೆ. ಕಾರಣ ಮೃತ ಮಹಾಲಕ್ಷ್ಮೀ ಅಶ್ರಫ್ ಎಂಬಾತನ ಜೊತೆ ಸಲುಗೆಯಿಂದ ಇದ್ದಳಂತೆ.
ಇದೇ ವಿಚಾರಕ್ಕೆ ಮಹಾಲಕ್ಷ್ಮಿ ಪತಿ ಕಳೆದ ವರ್ಷ ನೆಲಮಂಗಲ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ನಂತರ ಪತಿ, ಪತ್ನಿ ದೂರವಾಗಿ ವಾಸ ಮಾಡುತ್ತಿದ್ರು. ಉತ್ತರಾಖಂಡ್ ಮೂಲದ ಅಶ್ರಫ್, ಬೆಂಗಳೂರಿನ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ. ಮಹಾಲಕ್ಷ್ಮಿ ಸಾವಿನ ಬಳಿಕ ಅಶ್ರಫ್ ಪರಾರಿಯಾಗಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಸಾವಿನ ಪ್ರಕರಣದಲ್ಲಿ ವೈಯಾಲಿಕಾವಲ್ ಪೊಲೀಸರಿಗೆ ಮಹಾಲಕ್ಷ್ಮಿ ಕುಟುಂಬಸ್ಥರು ಇನ್ನೂ ಮೂವರ ಬಗ್ಗೆ ಮಾಹಿತಿ ನೀಡಿದ್ದಾರೆ. ಅಶ್ರಫ್ ಜೊತೆಗೆ ಮುಕ್ತ, ಶಶಿಧರ್, ಸುನೀಲ್ ಮೂವರು ಮಹಾಲಕ್ಷ್ಮಿಯ ಸಹೋದ್ಯೋಗಿಗಳು. ಕೆಲಸ ಮಾಡುವ ಕಡೆಯೂ ಮಹಾಲಕ್ಷ್ಮಿ ಜಗಳ ಮಾಡಿಕೊಂಡಿದ್ದರು. ಹೀಗಾಗಿ ಒಟ್ಟು ನಾಲ್ವರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಹಾಲಕ್ಷ್ಮೀ ಜೊತೆ ತುಂಬಾ ಸಲುಗೆಯಿಂದ ಇದ್ದ ಅಶ್ರಫ್ ಅನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.