ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿ ಕೋಲಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ 327 ಮಹಿಳೆಯರು ಮೃತ ಪಟ್ಟಿದ್ದಾರೆ. ಇದು ನಮ್ಮ ವ್ಯವಸ್ಥೆಯ ವೈಪಲ್ಯಗಳಿಂದ ಆಗಿರುವ ಘಟನೆ. ಈ ಸಂಬಂಧ ಈಗಾಗಲೇ ಶಿಸ್ತುಕ್ರಮ ಜರುಗಿಸಿ, ನೋಟೀಸ್ ಜಾರಿ ಮಾಡಲಾಗಿದೆ. ಔಷಧಿ ಪೂರೈಕೆ ಕಂಪನಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ. ವ್ಯವಸ್ತೆ ಸರಿಪಡಿಸಲು ಪುಡ್ ಅಂಡ್ ಡ್ರಗ್ ಕಂಟ್ರೋಲ್ ಗೆ ಐ.ಎ.ಎಸ್ ಅಧಿಕಾರಿ ನೇಮಿಸುತ್ತೇವೆ. ಮಹಿಳೆಯರ ಸಾವಿಗೆ ಕಾರಣವೇನು? ಸಾವಿನ ಕುರಿತು ಆಡಿಟ್ ಮಾಡಿಸ್ತೇವೆ. ಮಹಿಳೆಯರ ಸಾವಿನ ತನಿಖೆಗಾಗಿ ಆರೋಗ್ಯ ಇಲಾಖೆಯ ಸಮಿತಿ ರಚನೆ ಮಾಡ್ತೇವೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಬ್ಯಾನ್ ಮಾಡಿರೊ ಔಷಧಿ ಖರೀದಿಸಲಾಗಿದೆ ಎಂಬ ಆರ್ ಅಶೋಕ್ ಹೇಳಿಕೆಗೆ ಗುಂಡೂರಾವ್ ತಿರುಗೇಟು ನೀಡಿದ್ದು, ನಾವು ಯಾವುದೇ ಔಷಧಿ ಖರೀದಿ ಮಾಡಿಲ್ಲ. ಆರ್ ಅಶೋಕ್‌ಗೆ ಮಾಹಿತಿಯಿಲ್ಲ. 22 ವಿವಿಧ ಔಷಧಿ ತಪಾಸಣೆ ನಡೆಸಿದಾಗ ರಾಜ್ಯದಲ್ಲಿ ಪೇಲ್ ಆದರು. ಕೇಂದ್ರದ ಲ್ಯಾಬ್ ನಲ್ಲಿ ಔಷಧಿ ಪಾಸ್ ಆಗಿದೆ. ಏಪ್ರಿಲ್ ನಿಂದ ನವೆಂಬರ್ ವರೆಗೂ 2 ಸಾವಿರ ಹೆರಿಗೆ ಆಗಿದೆ. ಯಾರೂ ಸತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ಸಾವು ಸಂಭವಿಸಿದ ನಂತರ ನಾವು ತನಿಖೆ ನಡೆಸಿದ್ದೇವೆ. ಮಹಿಳೆಯರ ಸಾವಿನಲ್ಲಿ ವೈದ್ಯರ ಲೋಪವಿಲ್ಲ, ಬೇರೇನೊ ಅನುಮಾನ ಇದೆ ಎಂದು ಹೇಳಿದ್ದಾರೆ.