ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಸ್ತಿ ಖುಷಿ ಆಗಬೇಡ, ಹೃದಯ ನಿಂತೀತು ಎಂದು ಜನ ಹೇಳೋ ಮಾತು ನಿಜವಾದ್ದು ಅಂತ ಈ ಸುದ್ದಿ ಓದೋವರೆಗೂ ನಿಮಗೆ ಗೊತ್ತಿರೋದಿಲ್ಲ. ಇಲ್ಲೊಬ್ಬ ಕಾಮನರ್ 33 ಕೋಟಿ ರೂಪಾಯಿ ಗೆದ್ದಿದ್ದು, ಖುಷಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ತನ್ನ ಅದೃಷ್ಟದಿಂದ ಕ್ಯಾಸಿನೋ ಒಂದರಲ್ಲಿ ಬರೋಬ್ಬರಿ 4 ಮಿಲಿಯನ್ ಡಾಲರ್ (33,38,19,200) ಜಾಕ್ ಪಾಟ್ ಹೊಡೆದಿದ್ದು, ಜಾಕ್ ಪಾಟ್ ಗೆದ್ದ ವಿಪರೀತ ಖುಷಿಯಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಆಘಾತಕಾರಿ ಘಟನೆ ಸಿಂಗಾಪುರದ ಮರೀನಾ ಬೇ ಕ್ಯಾಸಿನೋದಲ್ಲಿ ನಡೆದಿದ್ದು, ಕ್ಯಾಸಿನೊ ಜೂಜಿನಲ್ಲಿ ಬರೋಬ್ಬರಿ 4 ಮಿಲಿಯನ್ ಡಾಲರ್ ಗೆದ್ದ ವ್ಯಕ್ತಿಯೊಬ್ಬರು, ಜಾಕ್ ಪಾಟ್ ಹೊಡೆದ ವಿಪರೀತ ಖುಷಿಯಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೇ ಆ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದರೂ ಅದನ್ನು ಅನುಭವಿಸುವ ಭಾಗ್ಯ ಅವರಿಗೆ ಇಲ್ಲದಂತಾಗಿದೆ.