ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇರಾನ್ ನಿಂದ ಅರ್ಮೇನಿಯಾ ಮೂಲಕ ಸ್ಥಳಾಂತರಗೊಂಡಿದ್ದ 345 ಭಾರತೀಯ ಮೀನುಗಾರರು ಸುರಕ್ಷಿತವಾಗಿ ಚೆನ್ನೈಗೆ ಆಗಮಿಸಿದ್ದಾರೆ.
ಈ ಮೀನುಗಾರರು ತಮಿಳುನಾಡು, ಕೇರಳ ಮತ್ತು ಗುಜರಾತ್ ಮೂಲದವರಾಗಿದ್ದು, ಉದ್ಯೋಗಕ್ಕಾಗಿ ಇರಾನ್‌ಗೆ ತೆರಳಿದ್ದರು. ಇದೀಗ ಕೇಂದ್ರ ಸರಕಾರ ತ್ವರಿತ ಕ್ರಮ ವಹಿಸಿ ಮೀನುಗಾರರನ್ನು ತವರಿಗೆ ವಾಪಾಸ್ ಕರೆಸಿಕೊಂಡಿದ್ದು, ಕುಟುಂಬಸ್ಥರ ಆತಂಕ ದೂರವಾಗಿದೆ.
ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೀನುಗಾರರನ್ನುಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸ್ವಾಗತಿಸಿ, ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಲು ಸಹಾಯ ಮಾಡಿದರು.
ಈ ವೇಳೆ ಮಾತನಾಡಿದ ಪಿಯೂಷ್ ಗೋಯಲ್, ಇರಾನ್‌ನಲ್ಲಿ ಸಿಲುಕಿಕೊಂಡಿದ್ದ ತಮಿಳುನಾಡಿನ ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂಬುದು ಸಂತೋಷಕರ ವಿಚಾರ. ಅರ್ಮೇನಿಯಾ ತಲುಪಲು ಸುಮಾರು 20 ಗಂಟೆಗಳ ಕಾಲ ಪ್ರಯಾಣಿಸುವ ಮೂಲಕ ಅವರನ್ನು ಭಾರತಕ್ಕೆ ಮರಳಿ ಕರೆತರಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
345 ವ್ಯಕ್ತಿಗಳಲ್ಲಿ 327 ಜನರು ತಮಿಳುನಾಡಿನ ಮೂಲದವರಾಗಿದ್ದು, ಉಳಿದಂತೆ ಕೇರಳದಿಂದ 10 ಜನರು, ಪುದುಚೇರಿ 5, ಗುಜರಾತ್ 2 ಮತ್ತು ಒಡಿಶಾ 1 ಗೆ ಸೇರಿದವರಾಗಿದ್ದಾರೆ .



