350 ಕೋಟಿ ಗೂ ಕಾಂಗ್ರೆಸ್’ಗೂ ಯಾವುದೇ ಸಂಬಂಧವಿಲ್ಲ: ಸಂಸದ ಧೀರಜ್ ಸಾಹು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸಂಸದ ಧೀರಜ್‌ ಸಾಹು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ 350 ಕೋಟಿ ರೂ. ನಗದು ಪತ್ತೆ ಮಾಡಿರುವ ಆದಾಯ ತೆರಿಗೆ (ಐಟಿ) ಇಲಾಖೆ ವಶಪಡಿಸಿಕೊಂಡಿದ್ದಾರೆ .

ಈಗಾಗಲೇ ಈ 10 ದಿನ ಶೋಧ ನಡೆಸಲಾಗಿದೆ. ಈ ಕುರಿತು ಮೊದಲ ಬಾರಿಗೆ ಧೀರಜ್‌ ಸಾಹು ಮಾತನಾಡಿದ್ದು, ಆ ಹಣಕ್ಕೂ ಕಾಂಗ್ರೆಸ್’ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಧೀರಜ್, ಇಂದು ಏನಾಗುತ್ತಿದೆಯೋ ಅದು ನನಗೆ ದುಃಖವನ್ನುಂಟು ಮಾಡುತ್ತದೆ.ವಶಪಡಿಸಿಕೊಳ್ಳಲಾದ ಹಣ ನನ್ನ ಸಂಸ್ಥೆಗೆ ಸೇರಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ವಶಪಡಿಸಿಕೊಳ್ಳಲಾದ ನಗದು ನನ್ನ ಮದ್ಯದ ಸಂಸ್ಥೆಗಳಿಗೆ ಸಂಬಂಧಿಸಿದೆ, ಇದು ಮದ್ಯ ಮಾರಾಟದ ಪ್ರಕ್ರಿಯೆಯಾಗಿದೆ. ಈ ಹಣಕ್ಕೂ ಕಾಂಗ್ರೆಸ್ ಅಥವಾ ಇತರ ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಹಣವೆಲ್ಲ ನನ್ನದಲ್ಲ, ಅದು ನನ್ನ ಕುಟುಂಬ ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ಸೇರಿದೆ. ಈಗ ಐಟಿ ದಾಳಿ ನಡೆಸಿದೆ, ಎಲ್ಲದಕ್ಕೂ ನಾನು ಲೆಕ್ಕ ನೀಡುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!