ವರ್ಷದ 3ನೇ ಸಿನಿಮಾ ಘೋಷಿಸಿದ ಬಾಲಿವುಡ್​ ನಟ ಅಕ್ಷಯ್​ ಕುಮಾರ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಅಕ್ಷಯ್ ಕುಮಾರ್ ಅವರು ಈ ವರ್ಷದ ಮೂರನೇ ಚಿತ್ರ ಘೋಷಿಸಿದ್ದು, ಬಚ್ಚನ್ ಪಾಂಡೆ ಮತ್ತು ಸಾಮ್ರಾಟ್ ಪೃಥ್ವಿರಾಜ್ ಚಿತ್ರಗಳ ನಂತರ ‘ರಕ್ಷಾ ಬಂಧನ’ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಪೋಸ್ಟರ್​ ಹರಿಬಿಡುವ ಮೂಲಕ ತಮ್ಮ ಮೂರನೇ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಕ್ಷಯ್​ಕುಮಾರ್​ ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ಸಿನಿಮಾದ ಮೊದಲ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ರಕ್ಷಾಬಂಧನ್​ ಎಂದು ಹೆಸರಿಸಲಾದ ಈ ಸಿನಿಮಾ ಅಣ್ಣ-ತಂಗಿಯರ ಬಾಂಧವ್ಯದ ಬಗೆಗಿನ ಕಥಾಹಂದರ ಹೊಂದಿದೆ. ಚಿತ್ರದ ಟ್ರೈಲರ್ ಜೂನ್ 21ರಂದು ಬಿಡುಗಡೆ, ಆಗಸ್ಟ್​ 11 ರಂದು ಸಿನಿಮಾ ತೆರೆ ಮೇಲೆ ಬರಲಿದೆ ಎಂದು ತಿಳಿಸಿದ್ದಾರೆ.
ಆನಂದ್ ಎಲ್. ರೈ ನಿರ್ದೇಶನದ ರಕ್ಷಾ ಬಂಧನ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!