ಹೊಸದಿಗಂತ ಡಿಜಿಟಲ್ ಡೆಸ್ಕ್:
4-5 ತಿಂಗಳಿಂದ ಅನ್ನಭಾಗ್ಯ ಹಣ ಮತ್ತು ಗೃಹಲಕ್ಷ್ಮಿ ಹಣ ಬಾರದೇ ಇರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರಾಕರಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ನಮ್ಮ ರಾಜ್ಯದಿಂದ 4.5 ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಕೊಡ್ತೀವಿ. ನಮಗೆ ಎಲ್ಲಿ ಹಣ ಉಳಿಯುತ್ತೆ. ಗ್ಯಾರಂಟಿಗಳ ಪ್ಲ್ಯಾನ್ ನಾವು ಸರಿಯಾಗಿಯೇ ಮಾಡಿದ್ದೇವೆ. ಒಂದು ತಿಂಗಳು ಲೇಟ್ ಆಗಿರಬಹುದು ಅಷ್ಟೇ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.