ಮಯನ್ಮಾರ್‌ನಲ್ಲಿ ನಡುಗಿದ ಭೂಮಿ: 4.5 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಯನ್ಮಾರ್‌ನ ಮಿನ್ಬುವಿನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಮಯನ್ಮಾರ್‌ನ ಮಿನ್ಬುವಿನಿಂದ 90 ಕಿ.ಮೀ ದೂರದಲ್ಲಿ ಇಂದು ಬೆಳಗ್ಗೆ 5:30ಕ್ಕೆ ಭೂಮಿಯಿಂದ 41.2 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ.

ಈವರೆಗೆ ಭೂಕಂಪದಿಂದಾಗಿ ಯಾವುದೇ ರೀತಿ ಆಸ್ತಿ ಹಾನಿ, ಪ್ರಾಣ ಹಾನಿಯಾಗಿರುವುದರ ಕುರಿತು ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!