ಇಂಡೋನೇಷ್ಯಾದ ಬೆಂಗ್ಕುಲುದಲ್ಲಿ ಭೂಕಂಪ: 4.6 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇಂಡೋನೇಷ್ಯಾದ ಬೆಂಗ್ಕುಲುದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಬೆಂಗ್ಕುಲು ಪಶ್ಚಿಮಕ್ಕೆ 62 ಕಿಮೀ ದೂರದಲ್ಲಿ ಬುಧವಾರದಂದು ಭೂಮಿ ನಡುಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ವರದಿ ಮಾಡಿದೆ.

ಬೆಂಗ್ಕುಲು ಇಂಡೋನೇಷ್ಯಾ ಪ್ರಾಂತ್ಯದ ರಾಜಧಾನಿಯಾಗಿದೆ. ಭೂಕಂಪವು ಬೆಳಿಗ್ಗೆ 04:09:29 (UTC 05:30) ಕ್ಕೆ ಸಂಭವಿಸಿದೆ ಮತ್ತು 48.8 ಕಿಮೀ ಆಳದಲ್ಲಿ ಅಪ್ಪಳಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಮಾಹಿತಿ ನೀಡಿದೆ.

ಈವರೆಗೆ ಯಾವುದೇ ಆಸ್ತಿ, ಪ್ರಾಣಹಾನಿ ವರದಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!