ಚೀನಾದಲ್ಲಿ ನಡುಗಿದ ಭೂಮಿ : 4.7 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಚೀನಾದ ಹೋಟಾನ್‌ನಿಂದ 263 ಕಿಮೀ ಆಗ್ನೇಯದಲ್ಲಿ ಬುಧವಾರ ಬೆಳಗ್ಗೆ 4.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಹೋಟಾನ್ ನೈಋತ್ಯ ಕ್ಸಿನ್‌ಜಿಯಾಂಗ್‌ನಲ್ಲಿರುವ ಪ್ರಮುಖ ಓಯಸಿಸ್ ಪಟ್ಟಣವಾಗಿದೆ, ಇದು ಪಶ್ಚಿಮ ಚೀನಾದ ಸ್ವಾಯತ್ತ ಪ್ರದೇಶವಾಗಿದೆ.

ಭೂಕಂಪವು 17 ಕಿಮೀ ಆಳದಲ್ಲಿ ಅಪ್ಪಳಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಮಾಹಿತಿ ನೀಡಿದೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!