CRIME| ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ ಆರೋಪದ ಮೇಲೆ ನಾಲ್ವರು ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊಯಮತ್ತೂರಿನ ಹೊರವಲಯದಲ್ಲಿರುವ ಪಲಮಲೈ ಬಳಿಯ ಪಸುಮಣಿ ಬುಡಕಟ್ಟು ವಸಾಹತು ಪ್ರದೇಶದಲ್ಲಿನ ಕೃಷಿ ಕ್ಷೇತ್ರದಲ್ಲಿ ಗಾಂಜಾ ಗಿಡಗಳನ್ನು (ಗಾಂಜಾ) ಬೆಳೆಸುತ್ತಿದ್ದ ಆರೋಪದ ಮೇಲೆ ಕೊಯಮತ್ತೂರು ಪೊಲೀಸರು ದಾಳಿ ನಡೆಸಿ ನಾಲ್ವರು ಬುಡಕಟ್ಟು ಜನರನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಸುಮಾರು 300 ಗಿಡಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳನ್ನು ಚೆಲ್ಲನ್ (60), ಪಳನಿಸಾನಿ (60), ರಾಜಪ್ಪನ್ (33), ವೇಲುಸಾಮಿ (26) ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರು ಸುಮಾರು 15.3 ಕೆಜಿ ತೂಕದ 300 ಗಾಂಜಾ ಗಿಡಗಳನ್ನು ಕಿತ್ತೆಸೆದಿದ್ದಾರೆ.

ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಯಮತ್ತೂರು ಜಿಲ್ಲಾ ಎಸ್ಪಿ ಬದರಿನಾರಾಯಣನ್ ಅವರು ಬುಡಕಟ್ಟು ಜನರಿಗೆ ಗಾಂಜಾ ಕೃಷಿಯಲ್ಲಿ ತೊಡಗಬೇಡಿ ಎಂದು ಎಚ್ಚರಿಕೆ ನೀಡಿದರು. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here