ಸಿಲಿಂಡರ್ ಸ್ಫೋಟ: ಮನೆ ಕುಸಿದು ಮಹಿಳೆ ಸಾವು, ಅವಶೇಷಗಳಡಿ ಸಿಲುಕಿದ ಮೂವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾರಣಾಸಿಯ ದಶಾಶ್ವಮೇಧದ ಜಂಗಂಬಾಡಿ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಕುಸಿದುಬಿದ್ದ ಮನೆಯೊಂದರ ಕೆಳಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ, ಇತರ ಮೂವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರನ್ನು ಬೇಬಿ ವರ್ಮಾ ಎಂದು ಗುರುತಿಸಲಾಗಿದೆ.

ಮನೆಯು ನಾಲ್ಕು ಕೋಣೆಗಳನ್ನು ಹೊಂದಿದ್ದು, ಎರಡು ಕೊಠಡಿಗಳ ಮೇಲ್ಛಾವಣಿ ಕುಸಿದು ನಾಲ್ವರು ಅವಶೇಷಗಳಡಿ ಸಿಲುಕಿದ್ದಾರೆ. ಬೇಬಿ ವರ್ಮಾ ಎಂಬ ಮಹಿಳೆ ಮನೆ ಕುಸಿದು ಬಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಎಸ್ ರಾಜಲಿಂಗಂ ಹೇಳಿದ್ದಾರೆ.

ಭಾರೀ ಸದ್ದು ಕೇಳಿದ ನಂತರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವಾರಣಾಸಿ ಡಿಎಂ ಎಸ್ ರಾಜಲಿಂಗಂ ತಿಳಿಸಿದ್ದಾರೆ. ಕುಟುಂಬದ ಸದಸ್ಯರು ಅವಶೇಷಗಳಡಿಯಲ್ಲಿ ಹೂತುಹೋಗಿದ್ದಾರೆ ಎಂದು ತಿಳಿದುಬಂದಿದೆ, ನಂತರ ಜನರು ಸಹಾಯಕ್ಕಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!