ಮಹಾ ಕುಂಭಮೇಳ ಮುಕ್ತಾಯಕ್ಕೆ 4 ದಿನ ಬಾಕಿ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಜೆಪಿ ನಡ್ಡಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಕ್ಕೆ ಕೇವಲ ಇನ್ನೂ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

Prayagraj: Union Minister JP Nadda visits the Maha Kumbh Mela 2025 #Galleryಇಂದು ಅರೈಲ್‌ನಲ್ಲಿರುವ ತ್ರಿವೇಣಿ ಅತಿಥಿ ಗೃಹಕ್ಕೆ ಆಗಮಿಸಿದ ಜೆ. ಪಿ. ನಡ್ಡಾ ಅವರನ್ನು ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ತದನಂತರ ಮಧ್ಯಾಹ್ನ 3 ಗಂಟೆಗೆ ಉಭಯ ನಾಯಕರು ಗಂಗಾ ನದಿಗೆ ಅರ್ಘ್ಯ ಸಲ್ಲಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಬಡೇ ಹನುಮಾನ್ ದೇವಾಲಯ ಮತ್ತು ಅಕ್ಷಯವತ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Prayagraj: Union Minister JP Nadda visits the Maha Kumbh Mela 2025 #Galleryಶನಿವಾರ ಬೆಳಗ್ಗೆ 8ಗಂಟೆಯವರೆಗೂ ಸುಮಾರು 33. 10 ಲಕ್ಷ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇಲ್ಲಿಯವರೆಗೂ ಸುಮಾರು 59. 64 ಕೋಟಿ ಯಾತ್ರಾರ್ಥಿಗಳು ಪುಣ್ಯ ಸ್ನಾನ ಮಾಡುವ ಮೂಲಕ ಇತಿಹಾಸದಲ್ಲಿ ಹೊಸ ದಾಖಲೆ ಮಾಡಲಾಗಿದೆ.

Prayagraj: Union Minister JP Nadda visits the Maha Kumbh Mela 2025 #Gallery

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!