ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ಪಡೆದಿರುವ ತಾಲಿಬಾನ್, ಈಗ ಪಾಕ್ ಮೇಲೆ ತನ್ನ ಗುರಿ ಇರಿಸಿದೆ. ಪಾಕ್ ಸೇನೆ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ನಡೆದ ದಾಳಿಯಲ್ಲಿ ನಾಲ್ವರು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಉತ್ತರ ವಜಿರಿಸ್ತಾನದ ಮೀರ್ ಅಲಿ ಪಟ್ಟಣದಲ್ಲಿ ಅಡಗಿ ಕುಳಿತಿದ್ದ ತಾಲಿಬಾನ್ ಬಂಡುಕೋರರ ಮೇಲೆ ಪಾಕ್ ಸೈನಿಕರು ದಾಳಿ ನಡೆಸಿದ್ದಾರೆ. ಈ ವೇಳೆ ತಾಲಿಬಾನಿಗಳ ಗುಂಡಿನ ದಾಳಿಗೆ ಪಾಕ್ ನ ನಾಲ್ವರು ಸೈನಿಕರು ಹತರಾಗಿದ್ದಾರೆ.
ಅಫ್ಘಾನಿಸ್ತಾನಿಗಳನ್ನು ಮಟ್ಟಹಾಕಲು ಪಾಕ್ ಆರಂಭಿಸಿದ್ದ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಈಗ ಪಾಕ್ ವಿರುದ್ಧವೇ ಗುಂಡಿನ ದಾಳಿ ನಡೆಸಿದೆ.
ಟಿಟಿಪಿಯನ್ನು ಪಾಕಿಸ್ತಾನಿ-ತಾಲಿಬಾನಿ ಎಂದೂ ಕರೆಯಲಾಗುತ್ತದೆ. ಆದರೆ ಟಿಟಿಪಿಯ ಎಲ್ಲಾ ಕಮಾಂಡ್ ಗಳು, ಟಿಟಿಪಿಯ ಬೇರುಗಳು ತಾಲಿಬಾನ್ ಕೈನಲ್ಲಿದೆ. ಹಾಗಾಗಿ ಟಿಟಿಪಿ ಪಾಕ್ ಮೇಲೆ ಗುಂಡಿನ ದಾಳಿ ಮಾಡಿ, ಪಾಕಿಸ್ತಾನವನ್ನು ತನ್ನ ವಶಕ್ಕೆ ಪಡೆಯಲು ಹಾಗೂ ಇಸ್ಲಾಂ ಅನ್ನು ಅಲ್ಲಿ ನೆಲೆಯೂರಿಸುವುದು ಟಿಟಿಪಿಯ ಗುರಿಯಾಗಿದೆ.