ಪಂಜಾಬ್‌ನ ಗಡಿ ಜಿಲ್ಲೆಯಲ್ಲಿ ರಾಕೆಟ್ ದಾಳಿ ಪ್ರಕರಣ: 4 ಶಂಕಿತರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೂರು ದಿನಗಳ ಹಿಂದೆ ಪಂಜಾಬ್‌ನ ತರ್ನ್ ತರನ್‌ನ ಪೊಲೀಸ್ ಠಾಣೆಯ ಮೇಲೆ ರಾಕೆಟ್‌ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ.
ದಾಳಿ ನಡೆಸಿದ ಇನ್ನೂ ಇಬ್ಬರು ಶಂಕಿತರನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಅದು ಹೇಳಿದೆ. ಶುಕ್ರವಾರ ರಾತ್ರಿ ತರ್ನ್ ತರನ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ಅನ್ನು ಹಾರಿಸಲಾಗಿತ್ತು. ಇದು ಕಳೆದ ಏಳು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಎರಡನೇ ದಾಳಿಯಾಗಿದೆ. ಪೊಲೀಸರು ಆರೋಪಿಗಳ ಗುರುತು ಬಹಿರಂಗ ಪಡಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!