Friday, June 2, 2023

Latest Posts

ಸಾಕಿದ ಮಾಲೀಕನನ್ನೇ ಕೊಂದ 40 ಮೊಸಳೆಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

72 ವರ್ಷದ ವೃದ್ಧನ ಮೇಲೆ ಸುಮಾರು 40 ಮೊಸಳೆಗಳು ದಾಳಿ ನಡೆಸಿ ಕೊಂದ ಭಯಾನಕ ಘಟನೆ ಕಾಂಬೋಡಿಯಾದಲ್ಲಿ ನಡೆದಿದೆ.
ಮೃತನ ಕುಟುಂಬ ಮೊಸಳೆ ಸಾಕಾಣಿಕೆ ಮಾಡುತ್ತಿದೆ. ಅದೇ ಮೊಸಳೆ (Crocodile) ಗಳನ್ನು ಕೂಡಿ ಹಾಕುವ ಪಂಜರದ ಒಳಗೆ ವೃದ್ಧ ಆಯತಪ್ಪಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ.

ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಪ್ರಯತ್ನಿಸುತ್ತಿದ್ದರುಈ ವೇಳೆ ಕೋಲಿನಿಂದ ಮೊಸಳೆಯನ್ನು ಬೆದರಿಸಲು ಮುಂದಾಗಿದ್ದರು. ಆಗ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಬಲವಾಗಿ ಎಳೆದಿದೆ. ಇದರಿಂದ ಆ ವೃದ್ಧ ಕೋಲಿನ ಸಮೇತ ಮೊಸಳೆಗಳ ವಾಸಸ್ಥಳದೊಳಗೆ ಬಿದ್ದಿದ್ದಾರೆ. ಕ್ಷಣಮಾತ್ರದಲ್ಲಿ ಅಲ್ಲಿದ್ದ ಮೊಸಳೆಗಳ ಹಿಂಡು ಅವರ ಮೇಲೆ ದಾಳಿ ನಡೆಸಿದ್ದು, ವೃದ್ಧನ ದೇಹವನ್ನು ಛಿದ್ರಗೊಳಿಸಿ ತಿಂದು ಹಾಕಿವೆ.

ಸ್ಥಳೀಯ ಮೊಸಳೆ ಕೃಷಿಕರ ಸಂಘಟನೆಯ ಅಧ್ಯಕ್ಷರಾಗಿದ್ದ ಲುವಾನ್ ಆಮ್ ಅವರ ಬಳಿ ಮೊಸಳೆ ಸಾಕಾಣಿಕೆ ಕೆಲಸವನ್ನು ಬಿಟ್ಟುಬಿಡುವಂತೆ ಕುಟುಂಬ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿತ್ತು. ಆದರೆ ಲುವಾನ್ ಅದನ್ನು ಒಪ್ಪಿರಲಿಲ್ಲ. ಈಗ ಲುವಾನ್ ಅವರೇ ಮೊಸಳೆಗಳಿಗೆ ಬಲಿಯಾದ ಕಾರಣ ತಮ್ಮಲ್ಲಿನ ಎಲ್ಲ ಮೊಸಳೆಗಳನ್ನು ಮಾರಾಟ ಮಾಡಲು ಕುಟುಂಬ ಮುಂದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!