ರಾಜ್ಯದಲ್ಲಿದೆ 40+5 ಪರ್ಸೆಂಟ್ ಕಮಿಷನ್‌ ಸರ್ಕಾರ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಸರ್ಕಾರ ಎಂದು ಬ್ರ್ಯಾಂಡ್‌ ಮಾಡಿದ್ದ ಕಾಂಗ್ರೆಸ್‌ 40+5 ಪರ್ಸೆಂಟ್‌ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗೇಲಿ ಮಾಡಿದ್ದಾರೆ.

ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ.

ಈ ಸರ್ಕಾರ ಪ್ರಾರಂಭಿಕ ಹಂತದ ಅಧಿಕಾರಿಗಳ ಸಭೆ ಮಾಡಿ ಯಾವ ರೀತಿ ಪಾಠ ಮಾಡಿದ್ದಾರೆ ಇವರು? ಸಿಎಂ ಹಾಗೂ ಡಿಸಿಎಂ ಅವರು ಒಂದಿಷ್ಟು ಸೂಚನೆ ಕೊಟ್ಟಿದ್ದಾರೆ. ನಾವು ಹೇಳಿದಂತೆ ಕೇಳಬೇಕು ಅನ್ನೋ ಮಾತು ಹೇಳಿದ್ದಾರೆ. ಬಿಜೆಪಿ ಬಗ್ಗೆ 40 ಪರ್ಸೆಂಟ್ ಬಗ್ಗೆ ಮಾತಾಡಿದರು ಇವರು. ತಮಟೆ ಹೊಟ್ಕೊಂಡು ಮಾತಾಡಿದ್ರು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ದಂಧೆ ಶುರುವಾಗಿದೆ ಅಂದರು. ಆದರೆ ಇದನ್ನೆಲ್ಲಾ ಫ್ರೂವ್ ಮಾಡೋಕೆ ಆಗಲ್ಲ. ಈಗ ಸರ್ಕಾರ ಬಂದಿದ್ಯಲ್ಲಾ 40 ಪರ್ಸೆಂಟ್ ಸತ್ಯಾಂಶ ಹೊರಗಿಡ್ತಾರಾ? , ಟೆಂಡರ್ ಸೇರಿದಂತೆ ಅನೇಕ ಅನುದಾನ ತಡೆ ಹಿಡಿದರು. 600 ಕೋಟಿ ರೂ. ವರ್ಕ್ ಆರ್ಡರ್‌ಗೆ ಕೊಟ್ಟಿದ್ದರು. 675 ಕೋಟಿ ಗುತ್ತಿಗೆದಾರರಿಗೆ, ಕೆಲಸ ಮಾಡಿರುವವರಿಗೆ ಎಲ್‌ಒಸಿ ರಿಲೀಸ್ ಆಯ್ತು. ಯಾವುದೇ ಹಣ ಬಿಡುಗಡೆ ಮಾಡಬೇಡಿ ಅಂತ ಆ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಎಂಪಿ ಹೇಳಿದ್ರಂತೆ.ಯಾರಿಗೂ ಹಣ ರಿಲೀಸ್ ಮಾಡಬೇಡಿ, ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿದ್ರಂತೆ. 675 ಕೋಟಿ ರೂ. ಎಲ್‌ಒಸಿ ಹಣ ಯಾಕೆ ಬಿಡುಗಡೆ ಆಗಲಿಲ್ಲ? ಈಗ ಹಣ ಬಿಡುಗಡೆ ಆಗಬೇಕು ಅಂದ್ರೆ 5 ಪರ್ಸೆಂಟ್ ಡಿಮ್ಯಾಂಡ್ ಇಟ್ಟಿದ್ದಾರಂತೆ. 40 ಪರ್ಸೆಂಟ್ ಜತೆ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ. ಹಾಗಾದ್ರೆ ಎಲ್ಲಿ ಏನಾಗಿದೆ ಅಂತ ಹೇಳಬೇಕಲ್ಲ? ಕೆಲಸ ಮಾಡಿರೋ ಕಾಮಗಾರಿಗೆ 5 ಪರ್ಸೆಂಟ್ ಕೇಳ್ತಾ ಇದ್ದೀರಲಾ, ನೀವು ಯಾವ ಹರಿಶ್ಚಂದ್ರರು? ಎಂದು ಪ್ರಶ್ನಿಸಿದರು.

ನಾನು ಸಿಎಂ ಆದಾಗ ವರ್ಗಾವಣೆಗೆ ಹಣ ಕೊಟ್ಟಿದ್ದೆ ಅಂತ ಒಬ್ಬ ಅಧಿಕಾರಿ ಹೇಳಲಿ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಕಾಂಗ್ರೆಸ್ ಜತೆ ಸರ್ಕಾರ ಇದ್ದಾಗ ಇವರು ಹೇಳಿದ ಮೇಲೆ ವರ್ಗಾವಣೆ ಮಾಡಬೇಕು ಎನ್ನುವ ಸ್ಥಿತಿ ಇತ್ತು. ನಾನು ಅಮೆರಿಕದಲ್ಲಿ ಇದ್ದಾಗ ಒಂದಿಷ್ಟು ಜನ ಮುನಿಸಿಕೊಂಡ್ರಲಾ ಆಗ ಏನಾಯ್ತು? ಕಾಂಗ್ರೆಸ್‌ನ ಒಬ್ಬ ಮಂತ್ರಿ ಸೋಪ್ ಅಂಡ್ ಡಿಟರ್ಜಂಟ್ ಮಂಡಳಿಗೆ ಅಧಿಕಾರಿ ಒಬ್ಬರನ್ನ ಹಾಕಿದ್ರು. ಅಲ್ಲಿ ಅಸಮಾಧಾನ ಆಯ್ತು ಆಗಲೇ ತಾನೆ ಸರ್ಕಾರ ಬಿದ್ದಿದ್ದು? ಸಿಎಂ ಅವರೇ ಒಬ್ಬ ಅಧಿಕಾರಿ ವರ್ಗಾವಣೆ ಮಾಡಿದ್ದರು, ಆದರೆ ಅದಕ್ಕೆ ಸಂಬಂಧಪಟ್ಟ ಮಂತ್ರಿ ವಿದೇಶದಲ್ಲಿ ಇದ್ದರು. ಸಿಎಂ ಆದೇಶ ಮಾಡಿದರೂ, ಅಧಿಕಾರ ತೆಗೆದುಕೊಳ್ಳಬೇಡಿ ಅಂತ ಮಂತ್ರಿ ಹೇಳಿದ್ದರಂತೆ. ಹಾಗಾದ್ರೆ ಎಷ್ಟು ಹಣ ಕೊಟ್ಟು ಬಂದ್ರು ಈ ಅಧಿಕಾರಿ? ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಸರ್ಕಾರದ ಹಗರಣ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ತನಿಖೆ ಮಾಡಲಿ ಯಾರು ಬೇಡ ಅಂದ್ರು? ಜನರ ಸಮಸ್ಯೆ ಬಗ್ಗೆ ಚಿಂತನೆ ಮಾಡಿ ಜನಪರ ಕೆಲಸ ಮಾಡಬೇಕು. ಆದರೆ ಈ ಸರ್ಕಾರ ಅದನ್ನ ಮಾಡ್ತಾ ಇಲ್ಲ. ಹಿಂದಿನ ಅಕ್ರಮಗಳನ್ನು ತನಿಖೆ ಮಾಡುವ ಸರ್ಕಾರ ಇದು. ಬಿಜೆಪಿಯವರಿಗೆ ಲ್ಯಾಂಡ್ ಕೊಟ್ರು ಅಂತರಲ್ಲಾ ಇವರ ಅಧಿಕಾರ ಇದ್ದಾಗ ಯಾರಿಗೆ ಲ್ಯಾಂಡ್ ಕೊಟ್ರು? ಹಿಂದೆ ಬಿಜೆಪಿ ಬಿ ಟೀಂ ಜೆಡಿಎಸ್ ಅಂದ್ರಲ್ಲ? ಈಗ ಯಾರು ಯಾವ ಟೀಂ ಅಂತ ಹೇಳಿ. 135 ಗೆಲ್ಲೋಕೆ ಯಾರು ಯಾರ ಜೊತೆ ಮೈತ್ರಿ ಮಾಡ್ಕೊಂಡ್ರಿ? ಜೆಡಿಎಸ್‌ಗೆ ಮತ ಹಾಕಿದ್ರೆ ಎಟಿಎಂ ಅಂದ್ರಲ್ಲ? ಈ ಎರಡು ಪಕ್ಷಗಳು ನಮ್ಮ ರಾಜ್ಯದ ಸಂಪತ್ತು ಲೂಟಿ ಮಾಡುವ ಎಟಿಎಂಗಳೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!