ಈಕ್ವೆಡಾರ್‌ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ:‌ 43 ಕೈದಿಗಳು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಕ್ವೆಡಾರ್‌ ಜೈಲು ಗಲಭೆಯ ತಾಣವಾಗಿದೆ. ಕಳೆದ ತಿಂಗಳು ನಡೆದ ಮಾರಾಮಾರಿಯಲ್ಲಿ 20 ಮಂದಿ ಸಾವನ್ನಪ್ಪಿದ್ರು. ಇದೀಗ ಜೈಲಿನಲ್ಲಿರುವ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕನಿಷ್ಠ 43 ಕೈದಿಗಳು ಸಾವನ್ನಪ್ಪಿದ್ದಾರೆಂದು ಅಲ್ಲಿನ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದಾರೆ.

ರಾಜಧಾನಿ ಕ್ವಿಟೊದಿಂದ ಪೂರ್ವಕ್ಕೆ ಸುಮಾರು 80 ಕಿಮೀ (50 ಮೈಲುಗಳು) ದೂರದಲ್ಲಿರುವ ಸ್ಯಾಂಟೋ ಡೊಮಿಂಗೊದ ಜೈಲಿನಲ್ಲಿರುವ ಲಾಸ್ ಲೋಬೋಸ್ ಮತ್ತು R7 ಎಂಬ ಎರಡು ಗ್ಯಾಂಗ್‌ ನಡುವೆ ಕಾದಾಟ ನಡೆದಿದೆ. ಈ ಸಮಯದಲ್ಲಿ ಒಟ್ಟು 108 ಕೈದಿಗಳು ಜೈಲಿನಿಂದ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಇವರೊಂದಿಗೆ ತಪ್ಪಿಸಿಕೊಂಡಿದ್ದ 112ಕೈದಿಗಳನ್ನು ಪುನಃ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪರಾರಿಯಾಗಿರುವ 108 ಕೈದಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಈಕ್ವೆಡಾರ್‌ ಜೈಲುಗಳು ಹಿಂಸಾಚಾರದ ಪ್ರತಿರೂಪಗಳಾಗಿವೆ. ಇತಿಹಾಸದಲ್ಲಿ ಕಂಡು ಕೇಳರಿಯದ ಅತ್ಯಂತ ಮಾರಣಾಂತಿಕ ಜೈಲು ಗಲಭೆಗಳನ್ನು ಕಂಡಿದೆ. ಹೆಚ್ಚುತ್ತಿರುವ ಅಪರಾಧದಿಂದಾಗಿ ಈಕ್ವೆಡಾರ್‌ನ ಕೆಲವು ಭಾಗಗಳು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿವೆ. 2020 ರಿಂದ ಈವರೆಗೆ ಈಕ್ವೆಡಾರ್ ಜೈಲುಗಳಲ್ಲಿ ನಡೆದ ಗಲಭೆಯಲ್ಲಿ ಕನಿಷ್ಠ 316 ಕೈದಿಗಳು ಸಾವನ್ನಪ್ಪಿರುವುದಾಗಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!