ಜನಗಣತಿ ಡಿಜಿಟಲೀಕರಣ: ಇನ್ನು ಮುಂದೆ ʼಇ-ಜನಗಣತಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನಗಣತಿಯನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದ್ದು ಇನ್ನು ಮುಂದೆ ʼಇ-ಜನಗಣತಿʼ ಜಾರಿಯಾಗಲಿದೆ. ಆ ಮೂಲಕ 100% ಎಣಿಕೆಯನ್ನು ಯಶಸ್ವಿಯಾಗಿ ಸಾಧಿಸಲಾಗುತ್ತದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಹೇಳಿದ್ದಾರೆ.

ಮೂರು ದಿನಗಳ ಅಸ್ಸಾಂ ಪ್ರವಾಸದಲ್ಲಿರು ಗೃಹ ಸಚಿವ ಅಮಿತ್‌ ಶಾ ಅಸ್ಸಾಂನ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ “ದೇಶದ ಅಭಿವೃದ್ಧಿಯ ಯೋಜನೆಗಳಿಗೆ ಸರಿಯಾದ ಮಾಹಿತಿ ಕಲೆಹಾಕುವುದು ಮುಖ್ಯವಾದದ್ದು. ಆದ್ದರಿಂದ ಜನಗಣತಿ ಪ್ರಕ್ರಿಯೆಯನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಈ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಜಾರಿ ಮಾಡಲಾಗುತ್ತಿದ್ದು ಮುಂದಿನ ಜನಗಣತಿಯು 100 ಪ್ರತಿಶತ ಡಿಜಿಟಲ್‌ ಆಗಲಿದೆ” ಎಂದು ಹೇಳಿದ್ದಾರೆ.

“ಇದರ ಜೊತೆಗೆ ಜನನ ಮತ್ತು ಮರಣ ದಾಖಲೆಗಳನ್ನೂ ಕೂಡ ಜೋಡಿಸಲಾಗುತ್ತದೆ. ಜನನದ ನಂತರ, ಜನಗಣತಿ ರಿಜಿಸ್ಟರ್‌ಗೆ ವಿವರಗಳನ್ನು ಸೇರಿಸಲಾಗುತ್ತದೆ. ಅವರಿಗೆ 18 ವರ್ಷ ತುಂಬಿದ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತದೆ ಮತ್ತು ಮರಣದ ನಂತರ ಹೆಸರನ್ನು ಅಳಿಸಲಾಗುತ್ತದೆ. ಇದಿಂದ ದೇಶದಲ್ಲಾಗುವ ಹುಟ್ಟು ಮತ್ತು ಸಾವುಗಳನ್ನು ವೇಗವಾಗಿ ದಾಖಲಿಸಲು ಸಾಧ್ಯವಾಗುತ್ತದೆ. ಹೆಸರು, ವಿಳಾಸ ಬದಲಾವಣೆಗೂ ಇದು ಅನುಕೂಲವಾಗುತ್ತದೆ. ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲೂ ಕೂಡ ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!