ಒಟ್ಟಿಗೆ ಪರೀಕ್ಷೆ ಬರೆದ ಅಪ್ಪ-ಮಗ; ಅಪ್ಪ ಪಾಸ್‌ ಆದ್ರೆ ಮಗ ಫೇಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪುಣೆಯ 43 ವರ್ಷದ ವ್ಯಕ್ತಿ ಮತ್ತು ಅವರ ಮಗ ಇಬ್ಬರೂ ಈ ವರ್ಷದ 10 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಯನ್ನು  ಒಟ್ಟಿಗೆ ಬರೆದಿದ್ದರು. ಆದರೆ ಫಲಿತಾಂಶ ಪ್ರಕಟವಾದಾಗ ಕುಟುಂಬಕ್ಕೆ ಅಚ್ಚರಿ ಕಾದಿತ್ತು. ತಂದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಮಗ ಫೇಲ್ ಆಗಿದ್ದ!.
ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ರಿಸೆಲ್ಟ್‌ ಹೊರಬಿದ್ದಿದ್ದು ಇಂತಹದ್ದೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
ಪುಣೆಯ ಬಾಬಾ ಸಾಹೇಬ್‌ ನಗರದ ನಿವಾಸಿ  ಭಾಸ್ಕರ್ ವಾಘ್ಮೋರೆ ಅವರು  7ನೇ ತರಗತಿಯ ಬಳಿಕ ಶಿಕ್ಷಣವನ್ನು ತ್ಯಜಿಸಿ ಕುಟುಂಬಕ್ಕೆ ನೆರವಾಗಲು ಉದ್ಯೋಗಕ್ಕೆ ಸೇರಿದ್ದರು. ಅದಾದ 30 ವರ್ಷಗಳ ಬಳಿಕ ಈ ವರ್ಷ ಅವರು ತಮ್ಮ ಮಗನೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು.
ನಾನು ಅಧ್ಯಯನವನ್ನು ಪುನರಾರಂಭಿಸಲು  ಉತ್ಸುಕನಾಗಿದ್ದೆ. ಆದ್ದರಿಂದ, ನಾನು 10 ನೇ ತರಗತಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದೆ. ನನ್ನ ಮಗನೂ ಈ ವರ್ಷ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದುದು ನನಗೆ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ. ಈಗ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿದ್ದರೂ ಮಗ ಎರಡು ಪತ್ರಿಕೆಗಳಲ್ಲಿ ಫೇಲ್ ಆಗಿದ್ದಕ್ಕೆ ಬೇಸರವಾಗಿದೆ. ಪೂರಕ ಪರೀಕ್ಷೆಗಳಿಗೆ ಸಹಾಯ ಮಾಡುತ್ತೇನೆ. ಅವನು ಪಾಸಾಗುತ್ತಾನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!