ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬುಧಾಬಿಯ ಬಿಗ್ ಟಿಕೆಟ್ ಲಾಟರಿಯಲ್ಲಿ ಕೇರಳದ ನರ್ಸ್ವೊಬ್ಬರು 45 ಕೋಟಿ ರೂ. ಹಣವನ್ನು ಗೆದ್ದುಕೊಂಡಿದ್ದಾರೆ.
ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್ಲಿ ಮೋಲ್ ಅಚ್ಚಮ್ಮ 45 ಕೋಟಿ ರೂ. ಗೆದ್ದಿದ್ದಾರೆ. ಲವ್ಲಿ ಮೋಲ್ ಅವರು ತನ್ನ ಕುಟುಂಬದೊಂದಿಗೆ ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ಈ ಲಾಟರಿ ಮೂಲಕವಾಗಿ ಅವರ ಅದೃಷ್ಟ ಖುಲಾಯಿಸಿದೆ.
ಈ ಕುರಿತಾಗಿ ಮಾತನಾಡಿದ ಲವ್ಲಿ ಮೋಲ್ ಅಚ್ಚಮ್ಮ, ನನ್ನ ಪತಿ ಪ್ರತಿ ತಿಂಗಳು ಅಬುಧಾಬಿ ಬಿಗ್ ಟಿಕೆಟ್ ಲಾಟರಿ ತೆಗೆದುಕೊಳ್ಳುತ್ತಿದ್ದರು. ಬಹುಮಾನದ ಮೊತ್ತದ ಒಂದು ಭಾಗವನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇನೆ. ಬಾಕಿ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.