ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ದುರಂತದ ತನಿಖೆಯನ್ನು ತಿಳಿಯಲು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಒಡಿಶಾ ರೈಲು ದುರಂತವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿರುವ ಮಾಹಿತಿಗಳು, ಘಟನೆಯ ಗಂಭೀರತೆನಯ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ತನಿಖೆಗೆ ರೈಲ್ವೇ ಮಂಡಳಿ ಸಿಬಿಐಗೆ ಶಿಫಾರಸು ಮಾಡುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಕುರಿತು ರೈಲ್ವೇ ಮಂಡಳಿ ಚರ್ಚೆ ನಡೆಸಿ ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಕೈಗೊಂಡಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.