45 ದಿನ ಯುಮುನಾ ನದಿ ಸ್ವಚ್ಛಗೊಳಿಸುವ ಶಿಕ್ಷೆ : ಇದು ದೆಹಲಿ ನ್ಯಾಯಾಲಯದ ವಿಶಿಷ್ಟ ತೀರ್ಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೆರೆಹೊರೆಯವರಿಬ್ಬರ ನಡುವಿನ ಗಲಾಟೆಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರಿಗೂ 45 ದಿನಗಳ ಕಾಲ ಯಮುನಾ ನದಿಯನ್ನು ಸ್ವಚ್ಛಗೊಳಿಸುವಂತೆ ತೀರ್ಪು ನೀಡಿದೆ.
ತನ್ನ ವಿಶಿಷ್ಟ ಆದೇಶದ ಮೂಲಕ ಜಗಳವಾಡಿ ನ್ಯಾಯಾಲಯದದೆದರು ಬಂದ ಎರಡೂ ಪಕ್ಷದವರಿಗೆ ದೆಹಲಿ ನ್ಯಾಯಾಲಯ ಯಮುನೆಯನ್ನು 45 ದಿನಗಳ ಕಾಲ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದು ಅವರ ಸ್ವಚ್ಛತಾ ಕಾರ್ಯದಿಂದ ತೃಪ್ತರಾದ ಬಳಿಕವೇ ಅವರ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದುಗೊಳಿಸಲಾಗುವುದು ಎಂದಿದೆ.

ದೆಹಲಿಯ ಇಬ್ಬರು ನೆರೆಹೊರೆಯವರ ನಡುವೆ ಮಾರಾಮಾರಿ ನಡೆದಿತ್ತು. ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದು, ಕೆಲವರು ಗಾಯಗೊಂಡಿದ್ದರು. ವಿಷಯ ತಿಳಿದ ಪೋಲೀಸರು ಜೈತ್‌ಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಹೊಡೆದಾಟ, ಕಿರುಕುಳ ಮತ್ತು ಇತರ ಆರೋಪಗಳ ಮೇಲೆ ಎರಡೂ ಕಡೆಯವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ವಿಷಯ ನ್ಯಾಯಾಲಯಕ್ಕೂ ತಲುಪಿತ್ತು ಮತ್ತು ಎರಡೂ ಕಡೆಯವರು ಶಾಂತ ಮನಸ್ಸಿನಿಂದ ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದರು. ಇಂಥಹ ಸಂದರ್ಭದಲ್ಲಿ ದಾಖಲಾಗಿರುವ ಎಫ್‌ಐಆರ್‌ಅನ್ನು ವಜಾ ಗೊಳಿಸಬೇಕಾಗುತ್ತದೆ. ವಿಚಾರಣೆ ನಡೆಸಿದ ನ್ಯಾಯಾಧೀಶರಾಧ ಜಸ್ಮೀತ್ ಸಿಂಗ್ ಅವರು ಯಮುನಾ ನದಿಯನ್ನು ಮುಂದಿನ 45 ದಿನಗಳ ಕಾಲ ಸ್ವಚ್ಛಗೊಳಿಸಲು ಸೂಚಿಸಿದ್ದರು.

ಕಕ್ಷಿದಾರರು ದೆಹಲಿ ಜಲಮಂಡಳಿಯ ಆಯುಕ್ತರನ್ನು ಸಂಪರ್ಕಿಸಿ ಅವರ ಸಲಹೆ ಮತ್ತು ಮೇಲ್ವಿಚಾರಣೆಯಲ್ಲಿ 45 ದಿನಗಳ ಕಾಲ ಯಮುನಾ ನದಿಯನ್ನು ಸ್ವಚ್ಛಗೊಳಿಸಬೇಕು, ಸ್ವಚ್ಛತಾ ಕಾರ್ಯದಿಂದ ತೃಪ್ತರಾದ ಬಳಿಕ ಜಲ ಮಂಡಳಿ ಅವರಿಗೆ ಪ್ರಮಾಣಪತ್ರ ನೀಡುತ್ತದೆ. ಅದನ್ನು ಪಡೆದ ಬಳಿಕವೇ ಎಫ್‌ಐಆರ್‌ ರದ್ದುಗೊಳಿಸುವಂತೆ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!