ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರೀಕ್ಷೆಯಂತೆಯೇ ಇಂದು 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಫಲಿತಾಂಶ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ನಾಲ್ವರು ವಿದ್ಯಾರ್ಥಿಗಳು 625/625ಅಂಕ ಗಳಿಸಿ ರ್ಯಾಂಕ್ ಪಟ್ಟಿಯಲ್ಲಿದ್ದಾರೆ.
ಔಟ್ ಆಫ್ ಔಟ್ ಅಂಕ ಗಳಿಸಿದ ವಿದ್ಯಾರ್ಥಿಗಳು
- ಭೂಮಿಕ ಆರ್.ಪೈ – ಬೆಂಗಳೂರು ದಕ್ಷಿಣ (625/625) ನ್ಯೂ ಮೆಕಾಲೆ ಶಾಲೆ, ಹೊಸೂರು ರಸ್ತೆ, ಬೆಂಗಳೂರು
- ಯಶಸ್ ಗೌಡ.ಎನ್ – ಚಿಕ್ಕಬಳ್ಳಾಪುರ (625/625) ಬಿಜಿಎಸ್ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ
- ಅನುಮಪಮಾ ಶ್ರೀಶೈಲ್ ಹಿರೋಹೊಳಿ – (ಸವದತ್ತಿ) ಬೆಳಗಾವಿ (625/625) ಶ್ರೀಕುಮಾರೇಶ್ವರ ಶಾಲೆ,ಸವದತ್ತಿ
- ಭೀಮನಗೌಡ ಹನುಮಂತಗೌಡ ಬಿರಾದರಪಾಟೀಲ್ -(ಮುದ್ದೇಬಿಹಾಳ) ವಿಜಯಪುರ (625/625) ಆಕ್ಸ್‌ಫರ್ಡ್ ಶಾಲೆ ನಾಗರಬೆಟ್ಟ, ಮುದ್ದೆಬಿಹಾಳ
ಈ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.