Tuesday, May 30, 2023

Latest Posts

ಟಿಕೆಟ್ ಇಲ್ಲದೆ ಪ್ರಯಾಣಿಸಿದ ಬರೋಬ್ಬರಿ 3,415 ಮಂದಿಯಿಂದ 5.54 ಲಕ್ಷ ದಂಡ ವಸೂಲಿ ಮಾಡಿದ ಕೆಎಸ್ಆರ್ ಟಿಸಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದಂತ ಪ್ರಯಾಣಿಕರಿಗೆ ದಂಡದ ಬಿಸಿಯನ್ನು ನಿಗಮ ಮುಟ್ಟಿಸಿದ್ದು, ಈ ಮೂಲಕ ಬರೋಬ್ಬರಿ 3415 ಪ್ರಯಾಣಿಕರಿಂದ 5.54 ಲಕ್ಷ ದಂಡ ವಸೂಲಿ ಮಾಡಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ನಿಗಮದಿಂದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಏಪ್ರಿಲ್ 2023ರಲ್ಲಿ ಕೆ ಎಸ್ ಆರ್ ಟಿಸಿ ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44,540 ವಾಹನಗಳನ್ನು ತನಿಖೆಗೆ ಒಳಪಡಿಸಿದೆ ಎಂದಿದೆ.

ತನಿಖೆಗೆ ಒಳಪಡಿಸಿ ವೇಳೆಯಲ್ಲಿ 3070 ಪ್ರಕರಣಗಳ ಪತ್ತೆ ಹಚ್ಚಲಾಗಿದೆ. 3415 ಟಿಕೇಟ್ ರಹಿತ ಪ್ರಯಾಣಿಕರಿಂದ ರೂ.5,54,832 ದಂಡ ವಸೂಲಿ ಮಾಡಲಾಗಿದೆ. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 2,38,803 ರೂ. ತನಿಖಾಧಿಕಾರಿಗಳ ಪತ್ತೆ ಹಚ್ಚಿದ್ದಾರೆ. ತಪ್ಪಿತಕ್ಷರ ವಿರುದ್ಧ ಇಲಾಖಾ ರಿತ್ಯಾ ಸೂಕ್ತ ಶಿಸ್ತಿನ ಕ್ರಮ ಜರಗಿಸಲಾಗಿದೆ ಎಂದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!