ಕಡಿಮೆ ಬಜೆಟ್‌ನಲ್ಲಿ ಹೋಗಿ ಬರಬಹುದಾದ 5 ಅದ್ಭುತ ದೇಶಗಳು ಇಲ್ಲಿವೆ ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾಸಕ್ಕೆ ಹೊರಡುವಾಗ ತಕ್ಕ ಪ್ಲಾನ್‌ ಇರಬೇಕು. ಜೊತೆಗೆ ನಮ್ಮ ಬಜೆಟ್‌ ಗೆ ತಕ್ಕಂತೆ ಪ್ರವಾಸಿ ತಾಣಗಳನ್ನಆರಿಸಿಕೊಳ್ಳುವುದು ಅಷ್ಟೇ ಮುಖ್ಯ. ಪ್ರವಾಸಿಗರಿಗೆ ಕಡಿಮೆ ಬಜೆಟ್‌ ನಲ್ಲಿ ಹೋಗಿಬರಬಹುದಾದ, ಅಷ್ಟೇನು ಪರಿಚಿತವಲ್ಲದ ಸುಂದರ ಸ್ಥಳಗಳನ್ನು ಅನ್ವೇಷಿಸಲು ಈ ಲೇಖನದಲ್ಲಿ ನಾವು ನೆರವಾಗುತ್ತಿದ್ದೇವೆ.  ಪ್ರವಾಸಿ ಸ್ಥಳದ ನಾಡಿಮಿಡಿತವನ್ನು ಸೆರೆಹಿಡಿಯಲು ಜನರು ಈಗ ಸಾಧ್ಯವಾದಷ್ಟು ಸ್ಥಳೀಯರಂತೆ ಪ್ರಯಾಣಿಸಲು ಬಯಸುತ್ತಾರೆ. ಹೀಗಾಗಿ ಹಾಸ್ಟೆಲ್‌ಗಳು, ಹೋಸ್ಟಿಂಗ್ ವ್ಯವಸ್ಥೆಗಳು, ಪ್ರಯಾಣದರ  ಇತ್ಯಾದಿ ಕೈಗೆಟುಕುವಷ್ಟು ಅಗ್ಗವಿರುವ ಟಾಪ್ 5 ಪಾಕೆಟ್ ಸ್ನೇಹಿ ದೇಶಗಳ ಪಟ್ಟಿ ಇಲ್ಲಿದೆ.

1. ವಿಯೆಟ್ನಾಂ

ವಿಯೆಟ್ನಾಂ ಆಗ್ನೇಯ ಏಷ್ಯಾದ ಒಂದು ದೇಶವಾಗಿದೆ. ಇದು ವಿಶ್ವದಲ್ಲಿ 15 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಈ ದೇಶವು ಭಾರತದ ಈಶಾನ್ಯ ಭಾಗಕ್ಕೆ ಹತ್ತಿರವಿರುವುದರಿಂದ ಭಾರತೀಯರಿಗೆ ವಿಮಾನಗಳು ಅಗ್ಗವಾಗಿವೆ. ವಿಯೆಟ್ನಾಂನಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭಾಗವಾಗಿರುವ ಹ್ಯಾಲೊಂಗ್ ಕೊಲ್ಲಿಗೆ ಭೇಟಿ ನೀಡುವುದನ್ನು ಮಾತ್ರ ಮಿಸ್‌ ಮಾಡಬೇಡಿ. ಹೋ ಚಿ ಮಿನ್ಹ್ ನಗರವು ದೇಶದ ವಾಣಿಜ್ಯ ಕೇಂದ್ರವಾಗಿದ್ದು, ಅಲ್ಲಿ ಪ್ರವಾಸಿಗರಿಗೆ ಇಷ್ಟವಾಗುವಂತಹ ಹಲವಾರು ತಾಣಗಳಿವೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುವುದರಿಂದ ಪ್ರವಾಸಿಗರಿಗೆರ ವಿಯೆಟ್ನಾಂ  ಅನ್ವೇಷಿಸಲು ಉತ್ತಮ ಸಮಯ. ಆಗಸ್ಟ್ ನಿಂದ ಅಕ್ಟೋಬರ್ ಸಹ ಉತ್ತಮ ಅವಧಿಯಾಗಿದೆ.

2. ಈಜಿಪ್ಟ್

ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿರುವ ಈಜಿಪ್ಟ್ ದೇಶವು ಬಹಳಷ್ಟು ಅದ್ಭುತ ಸ್ಥಳಗಳನ್ನು ಹೊಂದಿದೆ. ಸಾಂಪ್ರದಾಯಿಕ ಪಿರಮಿಡ್‌ಗಳ ತವರು ಈಜಿಪ್ಟ್ ಅತ್ಯಂತ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ. ವಿವಿಧ ದೇವಾಲಯಗಳು, ಸ್ಮಾರಕಗಳು ಮತ್ತು ಶಿಲ್ಪಕಲೆಗಳು ತಮ್ಮದೇ ಆದ ಕಥೆಯನ್ನು ಹೊಂದಿರುವುದರಿಂದ ಇತಿಹಾಸ, ಮಾನವಶಾಸ್ತ್ರ ಮತ್ತು ವಾಸ್ತುಶಿಲ್ಪ ಪ್ರಿಯರಿಗೆ ಇದು ಸಂಪೂರ್ಣ ಆನಂದಮರ ಅನುಭವ ನೀಡುತ್ತದೆ. ಈ ಐತಿಹಾಸಿಕ ಅದ್ಭುತಗಳನ್ನು ವೀಕ್ಷಿಸುವ ಮೊದಲು ನೀವು ವಿಶ್ವಾಸಾರ್ಹ ಮಾರ್ಗದರ್ಶಿಯನ್ನು ನೇಮಿಸಿಕೊಳ್ಳಿ ಅಥವಾ ಅಲ್ಲಿನ ವಿಚಾರಗಳ ಬಗ್ಗೆ ಸಂಶೋಧನೆ ಮಾಡುವುದನ್ನು ಮರೆಯಬೇಡಿ. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಈಜಿಪ್ಟ್‌ಗೆ ಭೇಟಿ ನೀಡಲು ಉತ್ತಮ ಸಮಯ. ಈ ಅವಧಿಯ ಚಳಿಗಾಲವು ಈಜಿಪ್ಟಿನ ಶಾಖವನ್ನು ನಿವಾರಿಸಿ ಹಿತಕರ ಅನುಭವ ನೀಡುತ್ತದೆ.ಪುಸ್ತಕ ಪ್ರೇಮಿಗಳಿಗಾಗಿ ಅಲೆಕ್ಸಾಂಡ್ರಿಯಾದ ಬಿಬ್ಲಿಯೊಥೆಕಾ ನೋಡಲೇಬೇಕಾದ ಸ್ಥಳವಾಗಿದೆ! ಖಾನ್-ಎಲ್-ಖಲಿಲಿ ಬಜಾರ್, ಲಕ್ಸರ್ ನಗರದ ಎದುರು ನೆಲೆಗೊಂಡಿರುವ ಹ್ಯಾಟ್ಶೆಪ್ಸುಟ್ ದೇವಾಲಯ, ಕೈರೋದಲ್ಲಿನ ಅಬು ಸಿಂಬೆಲ್ ದೇವಾಲಯ ಮತ್ತು ಮುಖ್ಯವಾಗಿ ಗಿಜಾದಲ್ಲಿನ ಸುಮಾರು 118 ಪಿರಮಿಡ್‌ಗಳಲ್ಲಿ ಕೆಲವನ್ನಾದರೂ ನೋಡಿಬನ್ನಿ.

3.ಲಾವೋಸ್

ಥೈಲ್ಯಾಂಡ್ ದೇಶದ ಮೇಲಿರುವ ಲಾವೋಸ್ ಅನ್ವೇಷಣೆಗೆ ಅದುಭುತ ಸ್ಥಳವಾಗಿದೆ. ದೊಡ್ಡ ಪರ್ವತಮಯ ಭೂಪ್ರದೇಶ ಮತ್ತು ಅದನ್ನು ಬಳಸಿ ಹರಿಯುವ ಪ್ರಬಲವಾದ ಮೆಕಾಂಗ್ ನದಿಯಿಂದ ಲಾವೋಸ್ ಆಶೀರ್ವದಿಸಲ್ಪಟ್ಟಿದೆ. ಲಾವೋಸ್ ಆಗ್ನೇಯ ಏಷ್ಯಾದಲ್ಲಿ ಅತಿ ದೊಡ್ಡದಾದ ಫಾ ಫೆಂಗ್ ಜಲಪಾತವನ್ನು ಸಹ ಹೊಂದಿದೆ. ದೇಶದಲ್ಲಿ ಅನ್ವೇಷಿಸಲು ಕೆಲವು UNESCO ವಿಶ್ವ ಪರಂಪರೆಯ ತಾಣಗಳೂ ಇವೆ. ಸುಮಾರು 4000 ದ್ವೀಪಗಳೊಂದಿಗೆ, ಲಾವೋಸ್ ಅನೇಕ ಪ್ರಮುಖ ರಚನೆಗಳು, ರಮಣೀಯ ಗುಹೆಗಳು, ಜಲಪಾತಗಳು ಮತ್ತು ಭೇಟಿ ನೀಡಲು ಅಭಯಾರಣ್ಯಗಳನ್ನು ಹೊಂದಿದೆ. ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಲಾವೋಸ್ ಗೆ ಭೇಟಿ ನೀಡಲು ಉತ್ತಮ ಸಮಯ.

4. ಕಿರ್ಗಿಸ್ತಾನ್

ಮಧ್ಯ ಏಷ್ಯಾದಲ್ಲಿರುವ ಒಂದು ಗುಡ್ಡಗಾಡು ದೇಶ; ಕಿರ್ಗಿಸ್ತಾನ್ ಅಪಾರವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಟ್ರೆಕ್ಕಿಂಗ್ ಅನ್ನು ಇಷ್ಟಪಡುವ ಎಲ್ಲಾ ಪರ್ವತಾರೋಹಣ ಪ್ರಿಯರು ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಸಜ್ಕಾ ಕಣಿವೆಯು ಹೆಚ್ಚು ನೋಡಬೇಕಾದ ಅತ್ಯಂತ ಮಾಂತ್ರಿಕ ಸ್ಥಳವಾಗಿದೆ. ಕಿರ್ಗಿಸ್ತಾನ್‌ನ ಸ್ಥಳೀಯ ಪಾಕಪದ್ಧತಿ ಮತ್ತು ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ಪ್ರಯತ್ನಿಸಲು ಮರೆಯಬೇಡಿ. ಈ ದೇಶಕ್ಕೆ ಭೇಟಿ ನೀಡಲು ಮೇ ನಿಂದ ಸೆಪ್ಟೆಂಬರ್ ವರೆಗೆ ಉತ್ತಮ ಸಮಯ.

5. ಹಂಗೇರಿ

ಮಧ್ಯ ಯುರೋಪ್‌ನಲ್ಲಿರುವ ಹಂಗೇರಿ ಖಂಡದಲ್ಲಿ ಭೇಟಿ ನೀಡಲು ಟಾಪ್ 10 ಅಗ್ಗದ ದೇಶಗಳಲ್ಲಿ ಒಂದಾಗಿದೆ. ಇದರ ರಾಜಧಾನಿ ಬುಡಾಪೆಸ್ಟ್ ನಗರವು ನಮ್ಮ ಬಾಲಿವುಡ್‌ಗೆ ಚಿತ್ರಗಳ ಶೂಟಿಂಗ್‌ ಗೆ ಆಕರ್ಷಣೆಯ ಸ್ಥಳವಾಗಿದೆ. ‘ಸಿಟಿ ಆಫ್ ಲೈಟ್ಸ್’ ಬುಡಾಪೆಸ್ಟ್ ಪ್ಯಾರಿಸ್ ಮತ್ತು ಪ್ರೇಗ್‌ಗೆ ತನ್ನ ಅತ್ಯದ್ಭುತ ಚೆಲುವಿನ ಮೂಲಕ ಕಠಿಣ ಸ್ಪರ್ಧೆ ನೀಡುತ್ತದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭಾಗವಾಗಿರುವ ಭವ್ಯವಾದ ಬುಡಾ ಕೋಟೆಗೆ ಭೇಟಿ ನೀಡುವುದನ್ನು ಮರೆಯಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!