ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆ.ಜಿ. ಅಕ್ಕಿ ಹೆಚ್ಚುವರಿಯಾಗಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅಕ್ಕಿಯ ಕೊರತೆಯಿಂದ ನೀಡಲು ಸಾಧ್ಯವಾಗದೇ ಕಳೆದ ತಿಂಗಳು ಹೆಚ್ಚುವರಿ 5 ಕೆಜಿಗೆ ಹಣ ನೀಡಿತ್ತು. ಇದೀಗ ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಬದಲು ಹಣ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆ.ಜಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ಕೊಡೋದಕ್ಕೆ ಪ್ರಯತ್ನ ಮಾಡುತ್ತೇವೆ, ಈ ಬಾರಿ ಆಗಸ್ಟ್ ನ ಅಕ್ಕಿ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.