ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4-3 ಗೋಲ್ಗಳ ಅಂತರದಿಂದ ಗೆದ್ದು ಸಂಭ್ರಮಿಸಿದೆ. ಈ ಮೂಲಕ ಭಾರತ 5 ಪಂದ್ಯಗಳದಲ್ಲಿ ೨-೧ ಗೆಲುವು ಸಾಧಿಸಿ ಸರಣಿ ಗೆಲುವಿನ ಆಸೆ ಜೀವಂತವಿರಿಸಿದೆ.
ಭಾರತ ಪರ ಹರ್ಮನ್‌ಪ್ರೀತ್ ಸಿಂಗ್ (12 ನಿಮಿಷ), ಅಭಿಷೇಕ್ (47 ನಿಮಿಷ), ಶಂಷೇರ್ ಸಿಂಗ್ (57 ನಿಮಿಷ) ಮತ್ತು ಆಕಾಶದೀಪ್ ಸಿಂಗ್ (60 ನಿಮಿಷ) ಪಂದ್ಯದ ನಿಗದಿತ ಸಮಯದ ಮುಕ್ತಾಯಕ್ಕೆ 54 ಸೆಕೆಂಡುಗಳಿರುವಾಗ ಗಳಿಸಿದ ಗೋಲು ಭಾರತ ತಂಡ ಗೆಲುವಿಗೆ ಕಾರಣವಾಯಿತು. ಆಸ್ಟ್ರೇಲಿಯಾ ಪರ ಜಾಕ್ ವೆಲ್ಶ್ (25ನೇ ನಿ.), ನಾಯಕ ಆಯರನ್ ಜಲೆವ್‌ಸ್ಕಿ (32ನೇ ನಿ.) ಮತ್ತು ನೇಥನ್ ಎಪರ್ಮಸ್ (59ನೇ ನಿ.) ಗೋಲು ಹೊಡೆದರು.