Sunday, December 3, 2023

Latest Posts

ಯಾರೋ ಒಬ್ಬರು ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ಮಾತನಾಡಿದ್ದಾರೆ: ಲ್ಯಾಪಿಡ್ ಟೀಕೆಗೆ ಬೆಂಬಲ ಸೂಚಿಸಿದ ಮುಫ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮುಸ್ಲಿಮರನ್ನು, ವಿಶೇಷವಾಗಿ ಕಾಶ್ಮೀರಿಗಳನ್ನು ರಾಕ್ಷಸರನ್ನಾಗಿಸಲು ಆಡಳಿತ ಪಕ್ಷವು ಮಾಡಿದ ಪ್ರಚಾರ ಎಂದು ಮುಫ್ತಿ ಹೇಳಿದ್ದಾರೆ.

ಗೋವಾದಲ್ಲಿ ನಡೆದ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ನೇತೃತ್ವ ವಹಿಸಿದ್ದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ಲ್ಯಾಪಿಡ್, ‘ದಿ ಕಾಶ್ಮೀರ್ ಫೈಲ್ಸ್’ ಒಂದು “ಪ್ರಚಾರದ ಚಲನಚಿತ್ರ” ಎಂದು ಹೇಳಿಕೆ ನೀಡಿದ್ದು, ಇದೀಗ ಈ ಹೇಳಿಕೆಯನ್ನು ಅನುಮೋದಿಸಿ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ಟೀಕೆಯನ್ನುಮಾಡಿದ್ದಾರೆ.

 

‘ಅಂತಿಮವಾಗಿ ಯಾರೋ ಒಬ್ಬರು ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಆಡಳಿತ ಪಕ್ಷವು ಮುಸ್ಲಿಮರನ್ನು ರಾಕ್ಷಸರನ್ನಾಗಿ ತೋರಿಸಲು ಮತ್ತು ಪಂಡಿತರು- ಮುಸ್ಲಿಮರ ನಡುವಿನ ಕಂದಕವನ್ನು ವಿಸ್ತರಿಸಲು ಪ್ರಚಾರ ಮಾಡಿದ ವಸ್ತು’ ಎಂದು ಕರೆದಿದ್ದಾರೆ. ಸತ್ಯವನ್ನು ಮೌನಗೊಳಿಸಲು ರಾಜತಾಂತ್ರಿಕ ಮಾರ್ಗಗಳನ್ನು ಈಗ ಬಳಸಲಾಗುತ್ತಿದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!